ಕರ್ನಾಟಕಪ್ರಮುಖ ಸುದ್ದಿ

ಪ್ರಧಾನಿ ಮೋದಿಗಾಗಿ ನಿರ್ಮಿಸಿದ್ದ ರಸ್ತೆ ಒಂದೇ ದಿನದಲ್ಲಿ ಕುಸಿಯ : ಬಿಬಿಎಂಪಿಯ ಮೂವರು  ಎಂಜಿನಿಯರ್​ಗಳಿಗೆ ಶೋಕಾಸ್​ ನೋಟಿಸ್​

ರಾಜ್ಯ(ಬೆಂಗಳೂರು),ಜೂ.24 : ಪ್ರಧಾನಿ ಮೋದಿಗಾಗಿ ನಿರ್ಮಿಸಿದ್ದ ರಸ್ತೆ ಒಂದೇ ದಿನದಲ್ಲಿ ಕುಸಿದಿದ್ದು, ರಸ್ತೆ ಕಾಮಗಾರಿ ನಿರ್ವಹಿಸಿದ್ದ ಬಿಬಿಎಂಪಿಯ ಮೂವರು  ಎಂಜಿನಿಯರ್​ಗಳಿಗೂ ಬಿಬಿಎಂಪಿ  ಶೋಕಾಸ್​ ನೋಟಿಸ್​ ಕೊಟ್ಟಿದೆ.

ಆರ್​​.ಆರ್​​​.ನಗರ ಎಕ್ಸಿಕ್ಯೂಟಿವ್​ ಎಂಜಿನಿಯರ್​ ಎಂ.ಟಿ.ಬಾಲಾಜಿ, ಆರ್​​​.ಆರ್​​​.ನಗರದ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್​ ಎಂಜಿನಿಯರ್​​ ಹೆಚ್​.ಜೆ.ರವಿ, ಆರ್​​.ಆರ್​​​.ನಗರ ಅಸಿಸ್ಟೆಂಟ್​ ಎಂಜಿನಿಯರ್​​ ಐ.ಕೆ.ವಿಶ್ವಾಸ್​ಗೆ ನೋಟಿಸ್​ ನೀಡಲಾಗಿದೆ.

ಮರಿಯಪ್ಪನ ಪಾಳ್ಯದ ಮುಖ್ಯರಸ್ತೆಯಲ್ಲಿ ರಿಪೇರಿ ಮಾಡಲಾಗಿತ್ತು.  ಪ್ರಧಾನಿ ಬಂದು ಹೋದ ಮಾರನೇ ದಿನವೇ ರಸ್ತೆ ಕುಸಿದಿದ್ದು, ಈ ಹಿನ್ನೆಲೆ  ಬಿಬಿಎಂಪಿ ರೋಡ್​ ಇನ್​ಫ್ರಾಸ್ಟ್ರಕ್ಚರ್​​​​ ಚೀಫ್​​ ಎಂಜಿನಿಯರ್​ರಿಂದ ಶೋಕಾಸ್ ನೋಟಿಸ್​ ನೀಡಲಾಗಿದೆ.(ಎಸ್.ಎಂ)

Leave a Reply

comments

Related Articles

error: