ಮೈಸೂರು

ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಪ್ರತಿಭಟನೆ

ಮೈಸೂರು,ಜೂ.24:- ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ನೀಡಿದ್ದ ಪ್ರತಿಭಟನೆಯ ಕರೆಗೆ ಮೈಸೂರಿನಲ್ಲಿಯೂ ಬೆಂಬಲ ವ್ಯಕ್ತವಾಗಿದ್ದು  ಸಂಯುಕ್ತ ಹೋರಾಟ ಕರ್ನಾಟಕ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಮೈಸೂರು ಜಿಲ್ಲಾಧಿಕಾರಿಗಳ ಕಛೆರಿ ಬಳಿ ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಸಶಸ್ತ್ರ ಪಡೆಗಳ ನೇಮಕಾತಿಯಲ್ಲಿ ಅಗ್ನಿಪಥ್ ಯೋಜನೆಯು ಜೈಜವಾನ್-ಜೈಕಿಸಾನ್ ಘೋಷಣೆಯ ಸ್ಫೂರ್ತಿಯನ್ನು ಧ್ವಂಸ ಮಾಡಲು ನಡೆಸಿರುವ ಹುನ್ನಾರವಾಗಿದೆ. ದೇಶದ ಭವಿಷ್ಯದ ಜೊತೆ ಆಡುತ್ತಿರುವ ಚೆಲ್ಲಾಟ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಷ್ಟ್ರದ ಭದ್ರತೆ ಹಾಗೂ ನಿರುದ್ಯೋಗಿ ಯುವಕರ ಕನಸಿಗೆ ಕೂಡ ತೀವ್ರ ಭಂಗ ಉಂಟು ಮಾಡಿದೆ. ಈ ದೇಶದ ಯೋಧರು ಅಂದರೆ ಸಮವಸ್ತ್ರ ಧರಿಸಿದ ರೈತರು ಅಭಿಪ್ರಾಯಪಡುತ್ತದೆ. ಬಹುತೇಕ ಸೈನಿಕರು ರೈತಾಪಿ ಕುಟುಂಬದಿಂದ ಬಂದವರು. ಸೈನ್ಯದಲ್ಲಿ ತೊಡಗಿಸಿಕೊಂಡಿದ್ದೇವೆ ಎಂಬುದು ಲಕ್ಷಾಂತರ ರೈತ ಕುಟುಂಬಗಳ ಹೆಮ್ಮೆ ಹಾಗೂ ಆರ್ಥಿಕ ಭದ್ರತೆಯ ದ್ಯೋತಕವಾಗಿದೆ.   ರೈತ ಚಳವಳಿಯ ಕಾರಣದಿಂದ ಸೋತು ಕಂಗಾಲಾಗಿದ್ದ ಈ ಸರ್ಕಾರವು ರೈತರ ಮೇಲೆ ಸೇಡು ತೀರಿಸಿಕೊಳ್ಳಲು ಆಡುತ್ತಿರುವ ಮತ್ತೊಂದು ದುರುದ್ದೇಶದ ಆಟ ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಆಲಗೂಡು ಶಿವಕುಮಾರ್, ಸರಗೂರು ನಟರಾಜು, ಪಿ.ಮರಂಕಯ್ಯ, ವಿಜಯೇಂದ್ರ, ಮಹೇಶ್, ಬೆಂಕಿಪುರ ಚಿಕ್ಕಣ್ಣ, ಕಲ್ಲಹಳ್ಳಿ ಕುಮಾರ್, ಯಾಚೇನಹಳ್ಳಿ ಸೋಮಶೇಖರ್, ಉಮೇಶ್, ಕಿರಗಸೂರು ರಜನಿ, ಆಲಗೂಡು ನಾಗರಾಜು, ಶಿವಯೋಗಿ, ಶಂಭುಲಿಂಗಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: