ಕರ್ನಾಟಕಪ್ರಮುಖ ಸುದ್ದಿ

ಮುಂದಿನ ದಿನಗಳಲ್ಲಿ ಸ್ಪಷ್ಟ ಬಹುಮತ ಪಡೆದ ಸರ್ಕಾರದ ಅವಧಿ ಮುಗಿಸೋಕು ಬಿಜೆಪಿ ಬಿಡೋದಿಲ್ಲ ; ಮಾಜಿ ಸಿಎಂ ಕುಮಾರಸ್ವಾಮಿ

ರಾಜ್ಯ(ಬೆಂಗಳೂರು),ಜೂ.24 : ಮುಂದಿನ ದಿನಗಳಲ್ಲಿ ಸ್ಪಷ್ಟ ಬಹುಮತ ಬಂದ ಸರ್ಕಾರವೂ ಉಳಿಯೋದು ಅನುಮಾನ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಮಾಧ್ಯಮದೊಂದಿಗೆ ಮಾತನಾಡಿ, ಬಿಜೆಪಿ ಪೂರ್ಣ ಬಹುಮತ ಪಡೆದ ಸರ್ಕಾರದ ಅವಧಿ ಮುಗಿಸೋಕು ಬಿಡೋದಿಲ್ಲ ಅನ್ನಿಸುತ್ತದೆ. ಬಿಜೆಗೆ ಅಧಿಕಾರದ ದಾಹ ಹೆಚ್ಚಾಗಿದೆ. ಬೇರೆಯವರು ಅಧಿಕಾರದಲ್ಲಿ ಇರೋದನ್ನು ಬಿಜೆಪಿಗೆ ಸಹಿಸೋಕೆ ಆಗ್ತಿಲ್ಲ. ಮಹಾರಾಷ್ಟ್ರ ಮೇಲ್ನೋ ಕ್ಕೆ ಉದ್ಧವ್ ಶಾಸಕರ ವಿಶ್ವಾಸ ಗಳಿಸಿಲ್ಲ ಅಂತಿದ್ದಾರೆ. ಆದರೆ, ಅದರ ಹಿಂದೆ ಇರೋದು ಬಿಜೆಪಿಯೇ. ಕರ್ನಾ ಕದಲ್ಲಿ ನನಗೂ ಇದರ ಅನುಭವ ಆಗಿದೆ. ನನ್ನ ಮೇಲು ಶಾಸಕರನ್ನು ವಿಶ್ವಾಸಕ್ಕೆ ತಗೊಂಡಿಲ್ಲ ಎಂದು ಆರೋಪ ಮಾಡಿದ್ದರು. ನಾನು ಕಾಂಗ್ರೆಸ್ ಶಾಸಕರ ಕ್ಷೇತ್ರದ ಅಭಿವೃದ್ಧಿಗೆ 19 ಸಾವಿರ ಕೋಟಿ ಅನುದಾನ ನೀಡಿದ್ದೆ. ಮಹಾರಾಷ್ಟ್ರರದ ಬಿಜೆಪಿ ನಡವಳಿಕೆ ಸಂವಿಧಾನ ರಚನೆಗೆ ಮಾಡಿದ ಅಪಚಾರ ಎಂದಿದ್ದಾರೆ.(ಎಸ್.ಎಂ)

Leave a Reply

comments

Related Articles

error: