
ಪ್ರಮುಖ ಸುದ್ದಿಮೈಸೂರು
ಚಾಕು ತೋರಿಸಿ ಹಣ ಲೂಟಿ ಮಾಡಿದ ದುಷ್ಕರ್ಮಿಗಳು
ಮೈಸೂರು, ಮೇ 16: ದುಷ್ಕರ್ಮಿಗಳು ಯುವಕನಿಗೆ ಚಾಕು ತೋರಿಸಿ ಹಣ ಕಸಿದುಕೊಂಡು ಪರಾರಿಯಾಗಿರುವ ಘಟನೆ ಕೆ.ಆರ್.ಎಸ್.ಪೊಲೀಸ್ ಠಾಣಾ ವ್ಯಾಪ್ತಿಯ ಬನ್ನಂಗಾಡಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ಪಾಂಡವಪುರ ತಾಲೂಕಿನ ಬಸ್ತಿ ಗ್ರಾಮದ ಚಂದ್ರು ಹಣ ಕಳೆದುಕೊಂಡ ಯುವಕ. ರಾತ್ರಿ ನಡೆದು ಬರುತ್ತಿದ್ದ ಯುವಕನನ್ನು ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅಡ್ಡಗಟ್ಟಿ 2 ಸಾವಿರ ರೂ. ದರೋಡೆ ಮಾಡಿದ್ದಾರೆ.
ಕೆ.ಆರ್.ಎಸ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. -(ವರದಿ: ಕೆ.ಎಸ್, ಎಲ್.ಜಿ)