ಕರ್ನಾಟಕಪ್ರಮುಖ ಸುದ್ದಿ

ನೀರು ಶುದ್ಧೀಕರಿಸುವ ಘಟಕದಲ್ಲಿ ಕ್ಲೋರಿನ್ ಸೋರಿಕೆ

ಪ್ರಮುಖಸುದ್ದಿ, ರಾಜ್ಯ,(ಹಾಸನ) ಮೇ.16:-  ಬೇಲೂರಿನ ನೀರು ಶುದ್ಧೀಕರಿಸುವ ಘಟಕದಲ್ಲಿ ಕ್ಲೋರಿನ್ ಸೋರಿಕೆ ಹಿನ್ನೆಲೆ 10 ಮಂದಿ ಅಸ್ವಸ್ಥಗೊಂಡ ಘಟನೆ ನಡೆದಿದೆ.

ಬೇಲೂರು ತಾಲೂಕಿನ ಗೆಂಡೇಹಳ್ಳಿ ರಸ್ತೆಯಲ್ಲಿರುವ ಘಟಕದಲ್ಲಿ  ಮುಂಜಾನೆ 5 ಗಂಟೆ ವೇಳೆಯಲ್ಲಿ  ಘಟನೆ ನಡೆದಿದ್ದು, 1 ಕಿ.ಮೀ. ವ್ಯಾಪ್ತಿಯವರೆಗೂ ವ್ಯಾಪಿಸಿದೆ.  ಕ್ಲೋರಿನ್ ನೀರನ್ನು  ಶುದ್ಧೀಕರಿಸುವ ಘಟಕದಲ್ಲಿ ಯಗಚಿ ಜಲಾಶಯದಿಂದ ಬರುವ ನೀರನ್ನು ಶುದ್ಧೀಕರಿಸಲು ಕ್ಲೋರಿನ್ ಬಳಸುವ ಟ್ಯಾಂಕರ್ ನ ವಾಲ್ವ್ ಸಡಿಲಗೊಂಡು ಘಟನೆ ನಡೆದಿದೆ ಎನ್ನಲಾಗಿದೆ.  ಹೆಚ್ಚಿನ ಚಿಕಿತ್ಸೆಗಾಗಿ 5 ಮಂದಿಯನ್ನು ಹಾಸನ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಬೇಲೂರು ಪುರಸಭೆ ಅಧಿಕಾರಿಗಳು ಭೇಟಿ ನೀಡಿದ್ದು, ಸಿಬ್ಬಂದಿಗಳು ಕ್ಲೋರಿನ್ ಸೋರಿಕೆಯನ್ನು ತಡೆಗಟ್ಟಿದ್ದಾರೆ. – (ವರದಿ: ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: