ಕರ್ನಾಟಕಪ್ರಮುಖ ಸುದ್ದಿ

ಅಂಬೇಡ್ಕರ್ ನೂತನ ಪ್ರತಿಮೆಗೆ ‌ಬೆಂಕಿ ಹಾಕಿದ ಕಿಡಿಗೇಡಿಗಳು

ರಾಜ್ಯ,(ಚಾಮರಾಜನಗರ) ಮೇ 16:  ಬಹುಶಃ ರಾಜಕೀಯ ವೈಷಮ್ಯಕ್ಕೋ ಏನೋ ನೂತನವಾಗಿ ನಿರ್ಮಿಸಿದ್ದ, ಉದ್ಘಾಟನೆಯಾಗದ ಅಂಬೇಡ್ಕರ್ ಪ್ರತಿಮೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ಸಿದ್ಧಯ್ಯನಪುರ ಗ್ರಾಮದಲ್ಲಿ ಭಾನುವಾರ   ನಡೆದಿದೆ ಎಂದು ತಡವಾಗಿ ತಿಳಿದುಬಂದಿದೆ.

ಸಿದ್ದಯ್ಯನಪುರ ಗ್ರಾಮದಲ್ಲಿ ಒಂದೇ ವರ್ಗದವರೇ ಇದ್ದು ಇದಕ್ಕೆ ರಾಜಕೀಯ ವೈಷಮ್ಯ ಇರಬಹುದು ಎಂದು ಶಂಕಿಸಲಾಗಿದೆ.  ಈ ಕೃತ್ಯದ ಬಗ್ಗೆ ಗ್ರಾಮಸ್ಥರೇ ದೂರು ನೀಡಿದ್ದು ಆರೋಪಿಗಳನ್ನು  ಬಂಧಿಸುವಂತೆ ಆಗ್ರಹಿಸಿದ್ದಾರೆ.

ಪೂರ್ವ ಗ್ರಾಮಾಂತರ ಠಾಣಾ ಇನ್ಸ್ಪೆಕ್ಟರ್ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.  ಜಿಲ್ಲೆಯಲ್ಲಿನ ಕೊಳ್ಳೆಗಾಲದಲ್ಲಿ  ಅಂಬೇಡ್ಕರ್ ಪ್ರವೇಶ ದ್ವಾರದ ಬಾಗಿಲಿಗೆ ಚಪ್ಪಲಿ ಹಾಕಿರುವುದು, ಹೊಂಗನೂರು ಗ್ರಾಮದಲ್ಲಿ  ಪ್ಲೆಕ್ಸ್  ಗೆ ಚಪ್ಪಲಿ ಹಾಕಿರುವುದು, ಈಗ ಒಂದೇ ವರ್ಗಕ್ಕೆ ಸೇರಿದ ಕಿಡಿಗೇಡಿಯೋರ್ವ ಸಿದ್ದಯ್ಯನಪುರ ಗ್ರಾಮದಲ್ಲಿ ಪ್ರತಿಮೆಗೆ  ಬೆಂಕಿ ಹಾಕಿದ್ದಾರೆ ಎನ್ನಲಾಗಿದೆ. ಬಹುಶಃ ಅದು ನಿಜವಾದರೆ ನಿಜಕ್ಕೂ ವಿಪರ್ಯಾಸ ಎಂದರೆ ತಪ್ಪಾಗಲಾರದು. (ವರದಿ: ಎಸ್.ವಿ, ಎಲ್.ಜಿ)

Leave a Reply

comments

Related Articles

error: