ಮೈಸೂರು

ಡಾ.ಬಾಬು ಜಗಜೀವನರಾಂ ಕ್ರಾಂತಿಗಳ ಮೂಲಕ ಆಧುನಿಕ ಭಾರತದ ಶಿಲ್ಪಿಯಾದರು : ಪ್ರೊ.ರಾಜಣ್ಣ ಬಣ್ಣನೆ

ಮೈಸೂರು,ಮೇ.16:- ಮೈಸೂರು ವಿಶ್ವವಿದ್ಯಾಲಯ ಡಾ.ಬಾಬುಜಗಜೀವನ್ ರಾಮ್ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಮಹಾರಾಣಿ ಮಹಿಳಾ ಕಲಾ ಕಾಲೇಜು ಸ್ನಾತಕೋತ್ತರ ಇತಿಹಾಸ ಅಧ್ಯಯನ ವಿಭಾಗದ ವತಿಯಿಂದ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಜಯಲಕ್ಷ್ಮಮ್ಮಣ್ಣಿ ಸಭಾಂಗಣದಲ್ಲಿ ಆಧುನಿಕ ಭಾರತದ ಚರಿತ್ರೆ ಬಾಬೂ ಜಗಜೀವನರಾಂ  ಹಾಗೂ ಅವರ ವಿಚಾರಧಾರೆಗಳ ಪ್ರಭಾವ ಕುರಿತ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು.

ವಿಚಾರಸಂಕಿರಣವನ್ನು ಮೈಸೂರು ವಶ್ವವಿದ್ಯಾನಿಲಯದ ಕುಲಪತಿ ಪ್ರೊ.ಆರ್.ರಾಜಣ್ಣ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಬಾಬುಜಗಜೀವನರಾಂ ನವಭಾರತ ನಿರ್ಮಾಣದ ಕರ್ತೃ. ದೇಶದ ಅಭಿವೃದ್ಧಿಗೆ ಜೀವನವಿಡೀ ಶ್ರಮಿಸಿದರು. ಹಸಿರುಕ್ರಾಂತಿ, ರೈಲ್ವೆಕ್ರಾಂತಿ, ಕೈಗಾರಿಕಾ ಕ್ರಾಂತಿಗಳ ಮೂಲಕ ಆಧುನಿಕ ಭಾರತದ ಶಿಲ್ಪಿಯಾದರು. ಅವರು ಪ್ರಧಾನಿಯಾಗುವ ಎಲ್ಲ ಲಕ್ಷಣಗಳನ್ನು ಹೊಂದಿದ್ದರೂ ಅಧಿಕಾರಕ್ಕಾಗಿ ಹಾತೊರೆಯದೇ, ಅಭಿವೃದ್ಧಿಗೆ ಹೋರಾಡಿದರು. ಅವರ ವ್ಯಕ್ತಿತ್ವ ಬೃಹದಾಕಾರವಾಗಿದ್ದು, ಜಗಜೀವನರಾಂ ಮತ್ತು ಅಂಬೇಡ್ಕರ್ ದೇಶದ ಎರಡು ಕಣ್ಣಿದ್ದಂತೆ ಎಂದು ವರ್ಣಿಸಿದರು.

ಈ ಸಂದರ್ಭ ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಪ್ರೊ.ಡಿ.ನಂಜುಂಡಯ್ಯ, ಪ್ರಾಂಶುಪಾಲ ಪ್ರೊ.ಬಿ.ಟಿ.ವಿಜಯ್, ಡಾ.ಬಾಬೂ ಜಗಜೀವನರಾಂ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಕೆ.ಸದಾಶಿವ, ಸ್ನಾತಕೋತ್ತರ ಇತಿಹಾಸ ವಿಭಾಗದ ಸಂಯೋಜಕಿ ಡಾ.ಎಂ.ಎಸ್.ಅನಿತಾ ಮತ್ತಿತರರು ಉಪಸ್ಥಿತರಿದ್ದರು. – (ವರದಿ:ಬಿ.ಎಂ,ಎಸ್.ಎಚ್)

Leave a Reply

comments

Related Articles

error: