ಮೈಸೂರು

ವಿಧವಾ ವಿವಾಹ ಪ್ರೋತ್ಸಾಹಧನ : ಅರ್ಜಿ ಆಹ್ವಾನ

ಮಂಡ್ಯ, ಮೇ 16 : 2017-18ನೇ ಸಾಲಿನ ಅಯವ್ಯಯ ಘೋಷಣೆಯಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿಧವೆಯರ ಮರು ವಿವಾಹವಾದಲ್ಲಿ 3 ಲಕ್ಷ ರೂ. ಪ್ರೋತ್ಸಾಹಧನ ನೀಡಲಾಗುವುದು. ಅರ್ಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದಂಪತಿಗಳು ಅರ್ಜಿಯನ್ನು ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಮಂಡ್ಯ ಜಿಲ್ಲೆ, ಮಂಡ್ಯ ಇವರಿಗೆ ಸಲ್ಲಿಸಬಹುದು.

ಮರು ವಿವಾಹವಾಗುವ ವಿಧವೆಯರು ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು. ಈ ಸೌಲಭ್ಯ ಪಡೆಯುವ ವಿಧವೆಯ ವಯೋಮಿತಿ ಕನಿಷ್ಟ 18 ವರ್ಷದಿಂದ ಗರಿಷ್ಟ 42 ವರ್ಷಗಳಾಗಿದ್ದು, ವರನಿಗೆ ಕನಿಷ್ಠ 21 ವರ್ಷದಿಂದ ಗರಿಷ್ಟ 45 ವಯಸ್ಸು ಆಗಿರತಕ್ಕದ್ದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದ ಯುವಕ/ಯುವತಿಯರು ಮದುವೆಯಾದ ಒಂದು ವರ್ಷದ ಅವಧಿಯೊಳಗೆ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಸಲ್ಲಿಸತಕ್ಕದ್ದು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದ ಯುವಕ/ಯುವತಿಯರು ಪ್ರೋತ್ಸಾಹಧನಕ್ಕಾಗಿ ಅರ್ಜಿ ಸಲ್ಲಿಸುವ ಮುಂಚೆ ಉಪ ನೋಂದಾಣಾಧಿಕಾರಿಗಳ ಕಛೇರಿಯಲ್ಲಿ ವಿವಾಹದ ಬಗ್ಗೆ ನೋಂದಾಯಿಸಿರಬೇಕು. ಪುನರ್ ವಿವಾಹವಾದ ವಿಧವೆಯು ವಾಸ್ತವ್ಯವಿರುವ ಜಿಲ್ಲೆಯಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು.

ವಿಧವಾ ಮಹಿಳೆಯು ಅಂತರ್ ಜಾತಿ ವಿವಾಹವಾದಲ್ಲಿ, ಸದರಿ ಯೋಜನೆಯಲ್ಲಿ ಪ್ರೋತ್ಸಾಹಧನ ಪಡೆದಿದ್ದಲ್ಲಿ, ಅಂತರ್ ಜಾತಿ ವಿವಾಹ ಯೋಜನೆಯಡಿ ಪ್ರೋತ್ಸಾಹಧನ ಪಡೆಯಲು ಅರ್ಹರಿರುವುದಿಲ್ಲ.

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಸಮುದಾಯದ ಯುವಕ/ಯುವತಿಯರು ಸರಳ ವಿವಾಹ ಕಾರ್ಯಕ್ರಮದಡಿ ಮದುವೆಯಾದಲ್ಲಿ, ಅಂತಹವರುಗಳು ಈ ಯೋಜನೆಯಡಿಯಲ್ಲಿ ಸರಳ ವಿವಾಹದ ರೂ.50,000/- ಹೊರತುಪಡಿಸಿ ಉಳಿದ ರೂ.2.50ಲಕ್ಷ ಪ್ರೋತ್ಸಾಹಧನವನ್ನು ಪಡೆಯಲು ಅರ್ಹರಿರುತ್ತಾರೆ.

ಮಂಜೂರಾದ ಪ್ರೋತ್ಸಾಹಧನದ ಹಣವನ್ನು ಪುನರ್ ವಿವಾಹವಾದ ವಿಧವೆಯ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗೆ ಎನ್.ಇ.ಎಫ್.ಟಿ ಮೂಲಕ ಜಮಾ ಮಾಡಲಾಗುವುದು. ಹೆಚ್ಚಿನ ಮಾಹಿತಿಗೆ ಉಪ ನಿದೇಶಕರು ಸಮಾಜ ಕಲ್ಯಾಣ ಇಲಾಖೆ, ಮಂಡ್ಯ ಇವರನ್ನು ಸಂಪರ್ಕಿಸಬಹುದು.

-ಎನ್.ಬಿ.ಎನ್.

Leave a Reply

comments

Related Articles

error: