ಪ್ರಮುಖ ಸುದ್ದಿ

ವರುಣಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧ: ಯತೀಂದ್ರ ಸಿದ್ದರಾಮಯ್ಯ

ಪ್ರಮುಖ ಸುದ್ದಿ, ನಂಜನಗೂಡು, ಮೆ, ೧೬: ಕಾಂಗ್ರೆಸ್ ಸರ್ಕಾರ ಜನರಪರ, ಅಭಿವೃದ್ಧಿಪರ ಸರ್ಕಾರವಾಗಿದ್ದು ಈ ನಿಟ್ಟಿನಲ್ಲಿ ವರುಣಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ವರುಣಾ ಕ್ಷೇತ್ರದ ವಸತಿ ಜಾಗೃತಿ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ವರುಣಾ ಕ್ಷೇತ್ರದ ಆಲಂಬೂರು, ಆಲಂಬೂರು ಮಂಟಿ, ಮಲ್ಲುಪುರ, ಕಿರುಗುಂದ, ಸೋನಹಳ್ಳಿ, ಮಡಹಳ್ಳಿ. ಅಳಗಂಚಿ, ಅಳಗಂಚಿಪುರ ಗ್ರಾಮಗಳಲ್ಲಿ ನಡೆದ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಆಲಂಬೂರು ಗ್ರಾಮದ ರಸ್ತೆ ಅಭಿವೃದ್ಧಿಗೆ ೧ ಕೋಟಿ ೧೫ ಲಕ್ಷ ಬಿಡುಗಡೆಯಾಗಿ ಕೆಲಸ ಮುಗಿದಿದೆ. ಸಮುದಾಯ ಭವನಕ್ಕೆ ೧೫ ಲಕ್ಷ ಬಿಡುಗಡೆಯಾಗಿದೆ, ಬಸವೇಶ್ವರ ದೇವಸ್ಥಾನಕ್ಕೆ ೧.೫ ಲಕ್ಷ, ಗರಡಿಮನೆಗೆ ೮ ಲಕ್ಷ ಬಿಡುಗಡೆಯಾಗಿದೆ. ಉಳಿದ ಕಾಮಗಾರಿಗಳನ್ನು ಮಾಡಿಕೊಡಲಾಗುವುದು ಎಂದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇಡೀ ರಾಜ್ಯದ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಅನ್ನಭಾಗ್ಯ, ಕ್ಷೀರಭಾಗ್ಯ, ನೀರಾವರಿ ಯೋಜನೆಗಳು, ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಮೈತ್ರಿ, ಮನಸ್ವಿನಿ, ಕೃಷಿಭಾಗ್ಯ, ಬಡ್ಡಿರಹಿತಸಾಲ, ವಿದ್ಯಾಸಿರಿ, ಪರಿಶಿಷ್ಟಜಾತಿ ಪಂಗಡದವರ ಅಭಿವೃದ್ಧಿಗೆ ೬೦ ಸಾವಿರ ಕೋಟಿ ಮೀಸಲು, ವಸತಿ ಶಾಲೆಗಳು, ಮೆಡಿಕಲ್ ಕಾಲೇಜುಗಳು ಹೀಗೆ ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತಂದು ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಮುಖ್ಯಮಂತ್ರಿಗಳು ಶ್ರಮಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಎಂ.ರಾಮಯ್ಯ, ರಾಜ್ಯ ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು, ರಾಜ್ಯ ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ನಂದಕುಮಾರ್, ತಾ.ಪಂ ಉಪಾಧ್ಯಕ್ಷ ಗೋವಿಂದರಾಜು, ಮಾಲೇಗೌಡ, ಕಲ್ಲಳ್ಳಿಬಾಬು, ಮರಳೂರು ಮಹೇಶ, ಧರ್ಮೇಂದ್ರ, ರಂಗಸ್ವಾಮಿ, ಗ್ರಾ.ಪಂ. ಅಧ್ಯಕ್ಷೆ ಜ್ಯೋತಿ, ಇ.ಒ. ರೇವಣ್ಣ, ತಹಸೀಲ್ದಾರ್ ದಯಾನಂದ್, ಕಲಾವತಿ, ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ಬಿ.ಎಂ)

Leave a Reply

comments

Related Articles

error: