ಮೈಸೂರು

ತಂದೆ-ತಾಯಿಗಳಿಗೆ ಮಕ್ಕಳು ಆಸರೆಯಾಗಬೇಕು : ರವಿ.ಡಿ.ಚೆನ್ನಣ್ಣನವರ್

ಮೈಸೂರು, ಮೇ.16:- ನಗರದ ಭಾರತೀ ವೃದ್ದಾಶ್ರಮದಲ್ಲಿ ಬಸವ ಜಯಂತಿ ಹಾಗೂ ತಾಯಂದಿರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.

ವಿದ್ಯಾರಣ್ಯಪುರಂನಲ್ಲಿರುವ ವೃದ್ದಾಶ್ರಮದಲ್ಲಿ  ಬಸವ ಜಯಂತಿ ಹಾಗೂ ತಾಯಂದಿರ ದಿನಾಚರಣೆಯ ಪ್ರಯುಕ್ತ ವೃದ್ಧರಿಗೆ ಒಂದು ತಿಂಗಳಿಗಾಗುವ ದವಸ ಧನ್ಯ ಹಾಗೂ ಹಣ್ಣು ಹಂಪಲನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರವಿ ಡಿ ಚನ್ನಣ್ಣನವರ್ ಮಾತನಾಡಿ ತಂದೆತಾಯಿಗಳನ್ನು ಗೌರವಿಸಬೇಕು. ಇತ್ತೀಚಿನ ದಿನಗಳಲ್ಲಿ ತಂದೆತಾಯಿಗಳನ್ನು ವೃದ್ಧಾಶ್ರಮ ಸೇರಿಸುವ ಕೆಲಸ ನಡೆಯುತ್ತಿದೆ. ಮಕ್ಕಳಿದ್ದರೂ ತಂದೆತಾಯಿಗಳು ಅನಾಥರಂತೆ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ನಾವು ಏನಾಗಿದ್ದೇವೆಯೋ ಅದಕ್ಕೆ ಕಾರಣ ತಂದೆ ತಾಯಿಗಳು ಎಂಬುದನ್ನು ಅರಿತು ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ವೃದ್ಧಾಪ್ಯದಲ್ಲಿ ತಂದೆ ತಾಯಿಗಳಿಗೆ ಮಕ್ಕಳು ಆಸರೆಯಾಗಬೇಕು ಎಂದರು.

Leave a Reply

comments

Related Articles

error: