ಸುದ್ದಿ ಸಂಕ್ಷಿಪ್ತ

ಮೈಸೂರು ದಸರಾ ಮಹೋತ್ಸವ ಅ6ರಂದು ಹಾಲು ಕರೆಯುವ ಸ್ಪರ್ಧೆ

dasara-logo-2016-octಮೈಸೂರು  ನಾಡಹಬ್ಬ ಮೈಸೂರು ದಸರಾ ಮಹೋತ್ಸವದಂಗವಾಗಿ ಹಾಲು ಕರೆಯುವ ಸ್ಪರ್ಧೆಯನ್ನು ಮೈಸೂರು ದಸರಾ ಉಪಸಮಿತಿಯೂ ಆಯೋಜಿಸಿದ್ದು ಅ.6ರ ಗುರುವಾರದಂದು ಬೆಳಿಗ್ಗೆ 5 ಗಂಟೆಗೆ ಜೆ.ಕೆ.ಮೈದಾನದಲ್ಲಿ ಹಾಲು ಕರೆಯುವ ಸ್ಪರ್ಧೆಯನ್ನು ಪಶುಸಂಗೋಪನ ಸಚಿವ ಎ.ಮಂಜು ಉದ್ಘಾಟಿಸುವರು. ಅಂದೇ ಬೆಳಿಗ್ಗೆ 7ಕ್ಕೆ ಅರಮನೆ ಆವರಣದಲ್ಲಿ ಪೊಲೀಸ್ ವಾದ್ಯ ವೃಂದ ನಡೆಯಲಿದ್ದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಗೃಹ ಸಚಿವ ಡಾ.ಪರಮೇಶ್ವರ, ಹಾಗೂ ಸಚಿವ ಹೆಚ್.ಎಸ್.ಮಹದೇವಪ್ರಸಾದ್ ಹಾಜರಿರುವರ.

ಮುಖ್ಯ ಅತಿಥಿಗಳಾಗಿ  ಸಂಸದರಾದ ಪ್ರತಾಪ್ ಸಿಂಹ, ಧ್ರುವನಾರಾಯಣ, ಸಿ.ಎಸ್.ಪುಟ್ಟರಾಜು, ಶಾಸಕರಾದ ಜಿ.ಟಿ.ದೇವೇಗೌಡ, ವಿ.ಶ್ರೀನಿವಾಸ ಪ್ರಸಾದ್, ಹೆಚ್.ಪಿ.ಮಂಜುನಾಥ್, ಎಂ.ಕೆ.ಸೋಮಶೇಖರ್, ವೆಂಕಟೇಶ್, ವಾಸು. ಸಾ.ರಾ.ಮಹೇಶ್. ಹಾಗೂ ಚಿಕ್ಕಮಾದು ಎಸ್.  ವಿಧಾನ ಪರಿಷತ್ ಸದಸ್ಯರಾದ ಸಂದೇಶ್ ನಾಗರಾಜು, ಆರ್. ಧರ್ಮಸೇನಾ ಹಾಗೂ ಕೆ.ಟಿ.ಶ್ರೀಕಂಠೇಗೌಡ ಉಪಸ್ಥಿತರಿರುವರು.

Leave a Reply

comments

Related Articles

error: