ಸುದ್ದಿ ಸಂಕ್ಷಿಪ್ತ

ಮೈಸೂರು ದಸರಾ ಮಹೋತ್ಸವ ಅ.7ರಂದು ಕವಿಗೋಷ್ಠಿ ಮತ್ತು ಮಹಿಳಾ ಕ್ರೀಡಾಕೂಟ

 

dasara-logo-2016-octನಾಡಹಬ್ಬ ಮೈಸೂರು ದಸರಾ ಮಹೋತ್ಸವದಂಗವಾಗಿ ಅ.7ರಂದು ಬೆಳಿಗ್ಗೆ 10 ಗಂಟೆಗೆ ಮಾನಸ ಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಕವಿಗೋಷ್ಠಿ ನಡೆಯಲಿದ್ದು ಗೋಷ್ಠಿಗೆ ಕವಿ ಮತ್ತು ಸಂಸ್ಕೃತಿ ಚಿಂತಕ ಕೋಟಗಾನಹಳಳಿ ರಾಮಯ್ಯ ಚಾಲನೆ ನೀಡುವರು.

ಬೆಳಿಗ್ಗೆ 11ಕ್ಕೆ ಜೆ.ಕೆ.ಮೈದಾನದಲ್ಲಿ ಜಿಲ್ಲಾ ಮಟ್ಟದ ಮಹಿಳೆಯರ ಕ್ರೀಡಾಕೂಟಗಳು ನಡೆಯಲಿದ್ದು ಸಚಿವ ವಿನಯ ಕುಲಕರ್ಣಿ ಕ್ರೀಡಾಕೂಟಕ್ಕೆ ಚಾಲನೆ ನೀಡುವರು. ಮುಖ್ಯ ಅತಿಥಿಗಳಾಗಿ  ಸಂಸದರಾದ ಪ್ರತಾಪ್ ಸಿಂಹ, ಧ್ರುವನಾರಾಯಣ, ಸಿ.ಎಸ್.ಪುಟ್ಟರಾಜು, ವಿರೋಧ ಪಕ್ಷದ ನಾಯಕರಾದ ಜಗದೀಶ್ ಶೆಟ್ಟರು, ಕೆ.ಎಸ್. ಈಶ್ವರಪ್ಪ, ಶಾಸಕರಾದ ಜಿ.ಟಿ.ದೇವೇಗೌಡ, ವಿ.ಶ್ರೀನಿವಾಸ ಪ್ರಸಾದ್, ಹೆಚ್.ಪಿ.ಮಂಜುನಾಥ್, ಎಂ.ಕೆ.ಸೋಮಶೇಖರ್, ವೆಂಕಟೇಶ್, ವಾಸು. ಸಾ.ರಾ.ಮಹೇಶ್. ಹಾಗೂ ಚಿಕ್ಕಮಾದು ಎಸ್.  ವಿಧಾನ ಪರಿಷತ್ ಸದಸ್ಯರಾದ ಸಂದೇಶ್ ನಾಗರಾಜು, ಆರ್. ಧರ್ಮಸೇನಾ ಹಾಗೂ ಕೆ.ಟಿ.ಶ್ರೀಕಂಠೇಗೌಡ ಜಿ.ಪಂ.ಅಧ್ಯಕ್ಷೆ ನಯೀಮ್ ಸುಲ್ತಾನ ನಜೀರ್ ಅಹಮದ್ ಉಪಸ್ಥಿತರಿರುವರು

 

Leave a Reply

comments

Related Articles

error: