ಕರ್ನಾಟಕಪ್ರಮುಖ ಸುದ್ದಿ

ಜಾತೀಯತೆ ತೊಡೆಯಬೇಕಾದರೆ ಶಿಕ್ಷಣ ಅತ್ಯಗತ್ಯ : ಸಿಎಂ ಸಿದ್ದರಾಮಯ್ಯ

ಪ್ರಮುಖಸುದ್ದಿ, ರಾಜ್ಯ(ಬೆಂಗಳೂರು) ಮೇ.16:- ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ  ಎನ್ ಎಸ್ ಎಸ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಯುವಜನ ಸೇವಾ ಇಲಾಖೆ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಯುವ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಗಳು ಅವಶ್ಯಕ ವಿದ್ಯಾರ್ಥಿಗಳಿಗೆ ಸೇವಾ ಮನೋಭಾವವೂ ಬೇಕು. ಈ ದಿಸೆಯಲ್ಲಿ ಎನ್ ಎಸ್ ಎಸ್ ತರಬೇತಿ ಅತ್ಯವಶ್ಯಕ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ ರಾಜ್ಯದಲ್ಲಿ ಶಿಕ್ಷಣದ ಪ್ರಮಾಣ ಹೆಚ್ಚಿದೆ. ಆದರೂ  ಜಾತೀಯತೆ,ಅಸಮಾನತೆ ಮರೆಯಾಗುತ್ತಿಲ್ಲ.ಇಂತ ಜಾತಿಯಲ್ಲೇ ಹುಟ್ಟಬೇಕೆಂದು ಯಾರೂ ಅರ್ಜಿ ಹಾಕಿರಲ್ಲ. ಜಾತೀಯತೆ ನಿರಂತರ ಕಾಡುವ ಸಮಸ್ಯೆಯಾಗಿದೆ. ಇದನ್ನು ತೊಡೆಯಬೇಕಾದರೆ ಶಿಕ್ಷಣ ಅತ್ಯಗತ್ಯ. ಸಮಾಜದ ಕೊಡುಗೆಯೂ ಬೇಕು.ವೈಚಾರಿಕತೆಯನ್ನು ಬೆಳೆಸಬೇಕು. ಇಲ್ಲವಾದರೆ ಅನೇಕ ಮೌಢ್ಯಗಳಿಗೆ ಗುರಿಯಾಗಬೇಕಾಗಲಿದೆ. ಯಾವುದು ಸರಿ,ಯಾವುದು ಮಿತ್ಯ ಎನ್ನುವುದು ಅರಿಯಬೇಕು. ಇದನ್ನು ತಿಳಿಸಿಕೊಡುವ ಕೆಲಸ ಸಮಾಜ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಹಲವು ಕೈಪಿಡಿ ಹಾಗೂ ಯುವ ಸ್ಪಂದನ,ಜೀವನ ಕೌಶಲ್ಯ ತರಬೇತಿ ಪುಸ್ತಕವನ್ನು  ಬಿಡುಗಡೆಗೊಳಿಸಲಾಯಿತು. ಈ ಸಂದರ್ಭ ಹಲವು ಗಣ್ಯರು ಉಪಸ್ಥಿತರಿದ್ದರು. – (ವರದಿ:ಎಸ್.ಎನ್,ಎಸ್.ಎಚ್)

Leave a Reply

comments

Related Articles

error: