ಕರ್ನಾಟಕಪ್ರಮುಖ ಸುದ್ದಿ

ಹಳಿ ತಪ್ಪಿದ ರೈಲು : ಪ್ರಯಾಣಿಕರು ಸುರಕ್ಷಿತ

ರಾಜ್ಯ, (ಚಿತ್ರದುರ್ಗ) ಮೇ.17:- ಚಿತ್ರದುರ್ಗದ ದ ಹೊರವಲಯದಲ್ಲಿ ಪ್ಯಾಸೆಂಜರ್ ರೈಲೊಂದು ಹಳಿ ತಪ್ಪಿದ ಘಟನೆ ನಡೆದಿದೆ. ಪ್ಯಾಸೆಂಜರ್ ರೈಲು ಹೊಸಪೇಟೆಯಿಂದ ಬೆಂಗಳೂರಿಗೆ ತೆರಳುತ್ತಿತ್ತು. ರಾಷ್ಟ್ರೀಯ ಹೆದ್ದಾರಿ 13 ರ ಮೇಲ್ಸೇತುವೆ ಬಳಿ ಘಟನೆ ನಡೆದಿದ್ದು,  ಹಳಿ ತಪ್ಪಿದ ನಂತರವೂ ರೈಲು 300 ಮೀಟರ್ ಕ್ರಮಿಸಿದೆ. ಯಾವುದೇ ಅಪಾಯವಿಲ್ಲದೆ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಅದೃಷ್ಟವಶಾತ್  ಬಾರಿ ಅನಾಹುತವೊಂದು ತಪ್ಪಿದಂತಾಗಿದೆ. ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ಸಿಬ್ಬಂದಿಗಳು  ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ.  ಹಳಿ ಬಿರುಕು ಬಿಟ್ಟಿದ್ದರಿಂದ  ಈ ಅವಘಡ  ಸಂಭವಿಸಿದೆ ಎನ್ನಲಾಗಿದೆ. – (ವರದಿ: ಕೆ.ಎಸ್,ಎಸ್.ಎಚ್)

Leave a Reply

comments

Related Articles

error: