
ಮೈಸೂರು
ಅಂತಾರಾಷ್ಟ್ರೀಯ ಮಕ್ಕಳ ಸಹಾಯವಾಣಿ ದಿನಾಚರಣೆ : ಬೀದಿ ನಾಟಕದ ಮೂಲಕ ಜಾಗೃತಿ
ಮೈಸೂರು, ಮೇ.17:- ಅಂತಾರಾಷ್ಟ್ರೀಯ ಮಕ್ಕಳ ಸಹಾಯವಾಣಿ ದಿನಾಚರಣೆ ಪ್ರಯುಕ್ತ ಮೈಸೂರಿನ ಗಾಂಧಿವೃತ್ತದಲ್ಲಿ ಬೀದಿನಾಟಕವನ್ನು ಹಮ್ಮಿಕೊಳ್ಳಲಾಗಿತ್ತು.
ಮಕ್ಕಳರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿರುವ ಚೈಲ್ಡ್ ಲೈನ್ 1098 ತುರ್ತು ದೂರವಾಣಿ ಸಂಖ್ಯೆಯಾಗಿದ್ದು, ಮಕ್ಕಳ ಸಹಾಯಕ್ಕಾಗಿ ದಿನದ 24 ಗಂಟೆಗಳಲ್ಲಿಯೂ ಚಾಲ್ತಿಯಲ್ಲಿರಲಿದೆ. ಮಹಿಳಾ ಮತ್ತು ಮಕ್ಕಳ ಸಚಿವಾಲಯದ ಸಹಯೋಗದೊಂದಿಗೆ ಕಳೆದ 7ವರ್ಷಗಳಿಂದ ಮೈಸೂರಿನಲ್ಲಿ ಮಕ್ಕಳ ಹಕ್ಕುಗಳ ಜಾಗೃತಿ ಮೂಡಿಸುವುದರೊಂದಿಗೆ ಸಂಕಷ್ಟದಲ್ಲಿರುವ ಮಕ್ಕಳ ರಕ್ಷಣೆಗಾಗಿ ಮಕ್ಕಳ ಸಹಾಯವಾಣಿ ಕಾರ್ಯನಿರ್ವಹಿಸುತ್ತಿದೆ.
ಸಹಾಯವಾಣಿಯು ಬೀದಿಮಕ್ಕಳು, ಬಾಲಕಾರ್ಮಿಕತೆ, ಬಾಲ್ಯವಿವಾಹ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳ ಕುರಿತು ಜಾಗೃತಿ ಮೂಡಿಸುತ್ತಿದ್ದರೂ, ಅಂತರಾಷ್ಟ್ರೀಯ ಮಕ್ಕಳ ಸಹಾಯವಾಣಿ ದಿನದಂದು ಮೈಸೂರಿನಾದ್ಯಂತ ಧ್ವನಿವರ್ಧಕ ಹಾಗೂ ಬೀದಿ ನಾಟಕದ ಮೂಲಕ ಮಕ್ಕಳ ಸುರಕ್ಷತೆ ಹಾಗೂ ರಕ್ಷಣೆ ಪೋಷಣೆ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಹೆಚ್ಚು ಜಾಗೃತಿ ಮೂಡಿಸಲಾಗುತ್ತಿದೆ. ಎಸ್.ಎಸ್.ಎಸ್.ಸಿ ಮುಗದ ತಕ್ಷಣ ತನ್ನಸ್ನೇಹಿತ ಮಗನಿಗೆ ಧಾರೆಯೆರೆಯಲು ನಿಶ್ಚಯಿಸಿದ ವಿಷಯ ತಿಳಿದವರು ಸಹಾಯವಾಣಿಗೆ ಕರೆ ಮಾಡಿ ಆ ವಿವಾಹವನ್ನು ನಿಲ್ಲಿಸಿ ಬುದ್ಧಿಮಾತು ಹೇಳಿದ್ದಾರೆ. ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧ ಎಂಬುದನ್ನು ತೋರಿಸಿಕೊಟ್ಟರಲ್ಲದೇ ಈ ಕುರಿತು ಜಾಗೃತಿ ಮೂಡಿಸಿದರು.
ಆರ್.ಎಲ್.ಎಚ್.ಪಿ ಸಂಸ್ಥೆ ನಡೆಸುತ್ತಿರುವ ತಂಗುದಾಣಗಳಿಂದ ಮತ್ತು ವಿವಿಧ ಕೊಳಚೆ ಪ್ರದೇಶಗಳಿಂದ 50ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದರು. – (ವರದಿ:ಕೆ.ಎಸ್,ಎಸ್.ಎಚ್)