ಮೈಸೂರು

ಅವದೂತ ದತ್ತಪೀಠದಲ್ಲಿ ಮೇ.21ರಿಂದ 28ರವರೆಗೆ ಮೂರು ಪ್ರಮುಖ ಉತ್ಸವಗಳಿಗೆ ಚಾಲನೆ

ಮೈಸೂರು, ಮೇ.17:- ಮೈಸೂರಿನ ಅವದೂತ ದತ್ತಪೀಠದಲ್ಲಿ ಮೇ.21ರಿಂದ 28ರವರೆಗೆ ಮೂರು ಪ್ರಮುಖ ಉತ್ಸವಗಳು ನಡೆಯಲಿವೆ ಎಂದು ಶ್ರೀಗಣಪತಿ ಸಚ್ಚಿದಾನಂದ ಆಶ್ರಮದ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ತಿಳಿಸಿದರು.

ಆಶ್ರಮದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶ್ರೀದತ್ತ ವೆಂಕಟೇಶ್ವರ ಕ್ಷೇತ್ರದ 18ನೇ ಬ್ರಹ್ಮೋತ್ಸವ, ನಾದಮಂಟಪದ 19ನೇ ವಾರ್ಷಿಕೋತ್ಸವ, ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 75ನೇ ವಜ್ರೋತ್ಸವ ವರ್ಧಂತ್ಯುತ್ಸವ ನಡೆಯಲಿದೆ. ದೇಶವಿದೇಶಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆಯಿದ್ದು, ಬರುವ ಭಕ್ತರಿಗೆ ಆಶ್ರಮದಲ್ಲಿ ಹಾಗೂ ಸಮೀಪದ ಕಲ್ಯಾಣಮಂಟಪಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಊಟೋಪಚಾರದ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ. ಮೇ.21ರಂದು ಸಂಜೆ 6ಗಂಟೆಗೆ ಉತ್ಸವದ ಉದ್ಘಾಟನೆಯನ್ನು ನೆರವೇರಿಸಲಾಗುತ್ತಿದ್ದು, ಸಪ್ತಾಹ ಪರ್ಯಂತ 75ಮಂದಿ ಸಾಮಾಜಿಕ ಕ್ಷೇತ್ರದಲ್ಲಿ ವಿಶೇಷ ಸೇವೆ ಸಲ್ಲಿಸುವರು. ಕಲಾವಿದರು ಹಾಗೂ ಪಂಡಿತರುಗಳನ್ನು ಸನ್ಮಾನಿಸಲಾಗುವುದು. ಶ್ರೀಗಳ ಜನ್ಮದಿನದಂದು ಮೇ.26 ರಂದು ಮಧ್ಯಾಹ್ನ 3ಗಂಟೆಗೆ ಗಿನ್ನಿಸ್ ವಿಶ್ವದಾಖಲೆ ಸಂಸ್ಥೆಯು 3 ವಿಶಿಷ್ಟ ನೀಡಲಿದೆ ಎಂದು ತಿಳಿಸಿದರು.

ಮೇ.26ರಂದು ಗಿನ್ನಿಸ್ ದಾಖಲೆ ಭಗವದ್ಗೀತೆ ಪುಸ್ತಕ ಹಾಗೂ 9 ಭಾಷೆಯಲ್ಲಿ ಬ್ರೈಲ್ ಲಿಪಿಯ ಭಗವದ್ಗೀತೆ ಪುಸ್ತಕಗಳ ಮೆರವಣಿಗೆ, ಮೇ.25ರಂದು ಸಂಜೆ 6ಗಂಟೆಗೆ ಬ್ಯಾಲೆ ನೃತ್ಯದ ಪ್ರದರ್ಶನ, ಮೇ.23ರಂದು ಸಂಜೆ 6ಗಂಟೆಗೆ ಉಸ್ತಾದ್ ಅಮ್ಮದ್ ಅಲಿಖಾನ್ ಅವರಿಗೆ ನಾದನಿಧಿ ಬಿರುದು ಪ್ರದಾನಿಸಲಾಗುವುದು. ಮೈಸೂರಿನ ಬನ್ನಿಮಂಟಪದ ಬಳಿಯ ಪುಲಕೇಶಿನಗರದಲ್ಲಿರುವ ಪೌರಕಾರ್ಮಿಕರ ಕಾಲೋನಿಯಲ್ಲಿ ದತ್ತಪೀಠದ ವತಿಯಿಂದ ನಿರ್ಮಿಸಲಾದ ಮಾರಮ್ಮದೇವಿ ದೇವಸ್ಥಾನದ ಉದ್ಘಾಟನೆ, ಮೈಸೂರು ಪೊಲೀಸ್ ಪಬ್ಲಿಕ್ ಶಾಲೆಗೆ ಶಾಲಾ ಬಸ್ ಕೊಡುಗೆ, ನಗರಪಾಲಿಕೆಗೆ ಎರಡು ಬಸ್ ಕೊಡುಗೆ, ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಿರಿಯ ಸ್ವಾಮೀಜಿಗಳಾದ ದತ್ತ ವಿಜಯೇಂದ್ರತೀರ್ಥರು ಉಪಸ್ಥಿತರಿದ್ದರು. – (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: