ಲೈಫ್ & ಸ್ಟೈಲ್

ಮೂಡ್ ಫ್ರೆಶ್ ಇರಲು ತಪ್ಪದೇ ಸೇವಿಸಿ..!

ಕೆಲವರು ಶರೀರದ ಹಾರ್ಮೋನ್ ಗಳ ಅಸಮತೋಲನದಿಂದಾಗಿ ಖಿನ್ನತೆಯಿಂದ ಬಳಲುತ್ತಾರೆ. ಆತ್ಮಹತ್ಯೆಯಂತಹ ಕೆಟ್ಟ ಆಲೋಚನೆಗಳು ಅವರನ್ನು ಕಾಡುತ್ತಿರುತ್ತವೆ. ಕೊಲಂಬಿಯಾ ವಿಶ್ವವಿದ್ಯಾಲಯದ ಸಂಶೋಧನೆಯ ಪ್ರಕಾರ ಟ್ರಿಪ್ಟೊಫೆನ್ ಮತ್ತು ಕಾರ್ಬೋಹೈಡ್ರೇಟ್ಸ್ ಹಾಗೂ ನ್ಯೂಟ್ರಿಆ್ಯಂಟ್ಸಿ ಇರುವ ಆಹಾರಗಳನ್ನು ಸೇವಿಸಿದರೆ ಆತ್ಮಹತ್ಯೆಯಂತಹ ಕೆಟ್ಟ ಯೋಚನೆಗಳು ಬರುವುದಿಲ್ಲ. ಖಿನ್ನತೆಯಿಂದ ಬಳಲುವವರು ಖಂಡಿತ ಈ ಆಹಾರಗಳನ್ನು ಸೇವಿಸಲೇಬೇಕು.

ಬಾಳೆಹಣ್ಣು: ಇದರಲ್ಲಿ ವಿಟಾಮಿನ್ ಮಿನರಲ್ಸ್ ಮತ್ತು ಕಾರ್ಬೋಹೈಡ್ರೆಟ್ಸ್ ಇರುತ್ತದೆ. ಇದರಿಂದ ರಕ್ತ ಮತ್ತು ಸಕ್ಕರೆಯ ಪ್ರಮಾಣ ಹೆಚ್ಚಲಿದೆ. ಪದೇ ಪದೇ ಆತ್ಮಹತ್ಯೆಯಂತಹ ಯೋಚನೆ ಬರುವುದಿಲ್ಲ.

ಮೊಟ್ಟೆ: ಇದರಲ್ಲಿ ಟ್ರಿಪ್ಟೊಫೆನ್ ಅಥವಾ ತೈರಾಸಿನ್ ಇರಲಿದೆ. ಇದರಲ್ಲಿ ಮನಸ್ಸನ್ನು ಪ್ರಶಾಂತವಾಗಿರಿಸುವ ಸೆರೆಟೋನಿನ್ ಹಾರ್ಮೋನ್ ಹೆಚ್ಚಲಿದೆ.

ಅನಾನಸು: ಇದರಲ್ಲಿ ಬ್ರೊಮೆಲಿನ್ ಇರಲಿದೆ. ಇದರಿಂದ ಮನಸ್ಸು ಉಲ್ಲಾಸವಾಗಿದ್ದು, ಉದಾಸೀನತೆ ತೊಲಗಲಿದೆ.

ಆಕ್ರೋಟ್ : ಇದರಲ್ಲಿ ಆರೋಗ್ಯಯುತವಾದ ಮೊನೊಸೆಚ್ಯುರೇಟೆಡ್ ಫೈಟ್ಸ್ ಮತ್ತು ಓಮೇಗಾ3 ಫೈಟಿ ಆ್ಯಸಿಡ್ಸ್ ಇದ್ದು, ಮನಸ್ಸು ಪ್ರಶಾಂತವಾಗಿರಲು ಸಹಾಯಕವಾಗಲಿದೆ. ಖಿನ್ನತೆ ದೂರಾಗಲಿದೆ.

ಡಾರ್ಕ್ ಚಾಕಲೇಟ್ಸ್: ಇದರಲ್ಲಿ ಫ್ಲೆವೊನಾಯ್ಟಸ್ ಇದ್ದು, ಇದರಿಂದ ಸೆರೊಟೋನಿನ್ ಹಾರ್ಮೋನ್ ಬಿಡುಗಡೆಗೊಳ್ಳಲಿದೆ. ಮನಸ್ಸು ಪ್ರಶಾಂತವಾಗಿರಲಿದೆ.

ಮೀನು: ಇದರಲ್ಲಿ ಓಮೇಗಾ3, ಫೈಟಿ ಆ್ಯಸಿಡ್ಸ್ ಹೇರಳವಾಗಿರಲಿದ್ದು, ಇದರ ಸೇವನೆಯಿಂದ ನೆಗೆಟಿವ್ ಆಲೋಚನೆಗಳು ಬರಲಾರದು.

ಅರಿಶಿನದ ಹಾಲು: ಅರಿಶಿನದಲ್ಲಿ  ಕರಕ್ಯೂಮಿನ್ ಇದ್ದು, ಇದನ್ನು ಹಾಲಿಗೆ ಬೆರೆಸಿ ಸೇವಿಸುವುದರಿಂದ ಮೂಡ್ ಫ್ರೆಶ್  ಇರಲಿದೆ. ಮನಸ್ಸಿನಲ್ಲಿ ಪದೇ ಪದೇ ಆತ್ಮಹತ್ಯೆ ವಿಚಾರಗಳು ಬರಲಾರದು.

ಗ್ರೀನ್ ಟೀ: ಇದರಲ್ಲಿ ಆ್ಯಂಟಿಆ್ಯಕ್ಸಿಡೆಂಟ್ಸ್ ಗಳಿದ್ದು ಅಮಿನೋ ಆ್ಯಸಿಡ್ಸ್ ಇದೆ. ಇದರಿಂದ ಒತ್ತಡ ದೂರಾಗಲಿದೆ.

ಬೆಣ್ಣೆ: ಟ್ರಿಫ್ಟೊಫೆನ್ ಇದ್ದು, ನೆಗೆಟಿವ್ ಆಲೋಚನೆಗಳಿಂದ ರಕ್ಷಿಸಲಿದೆ. ಇವುಗಳನ್ನು ವಾರದಲ್ಲಿ ಮೂರು ಬಾರಿಯಾದರೂ ಸೇವಿಸಿ ಫ್ರೆಶ್ ಆಗಿರಿ. (ಎಸ್.ಎಚ್)

Leave a Reply

comments

Related Articles

error: