ಕ್ರೀಡೆದೇಶಪ್ರಮುಖ ಸುದ್ದಿವಿದೇಶ

ಕಾಮನ್ ವೆಲ್ತ್ ಗೇಮ್ಸ್ : ಚಿನ್ನ ಗೆದ್ದ ಟೇಬಲ್ ಟೆನಿಸ್ ತಾರೆ ಅಚಂತ ಶರತ್ ಕಮಲ್

ವಿದೇಶ(ಬರ್ಮಿಂಗ್ಹ್ಯಾಮ್),ಆ.9:- ಭಾರತದ ಟೇಬಲ್ ಟೆನಿಸ್ ತಾರೆ ಅಚಂತ ಶರತ್ ಕಮಲ್ 40ರ ಹರೆಯದಲ್ಲೂ ಮಿಂಚುತ್ತಲೇ ಇದ್ದಾರೆ.

ಅಚಂತ ಶರತ್ ಕಮಲ್ ಕಾಮನ್ವೆಲ್ತ್ ಗೇಮ್ಸ್ 2022 ರಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ. ವಾಸ್ತವವಾಗಿ ಅಚಂತ ಶರತ್ ಕಮಲ್ ಮೊದಲು 2006 ರ ಮೆಲ್ಬೋರ್ನ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಗೆದ್ದರು. ಈ ಮೂಲಕ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಇದುವರೆಗೆ 7 ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. 2006ರ ಮೆಲ್ಬೋರ್ನ್ ಕಾಮನ್‌ ವೆಲ್ತ್ ಗೇಮ್ಸ್‌ ನಲ್ಲಿ ಅಚಂತ ಶರತ್ ಕಮಲ್ ಚಿನ್ನದ ಪದಕ ಗೆದ್ದಾಗ ಅವರಿಗೆ 24 ವರ್ಷ.

2022ರ ಕಾಮನ್‌ ವೆಲ್ತ್ ಗೇಮ್ಸ್‌ ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಟೇಬಲ್ ಟೆನಿಸ್ ತಾರೆ ಅಚಂತ ಶರತ್ ಕಮಲ್ ಈ ಹಿಂದೆ 2006, 2010, 2014 ಮತ್ತು 2018ರಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದಿದ್ದಾರೆ. ಗಮನಾರ್ಹವೆಂದರೆ ಅಂತಿಮ ಪಂದ್ಯದಲ್ಲಿ ಭಾರತದ ತಾರೆ ಲಿಯಾಮ್ ಪಿಚ್‌ಫೋರ್ಡ್ ಅವರನ್ನು ಸೋಲಿಸಿದರು. ಈ ಮೂಲಕ ಇದೀಗ 2022ರ ಕಾಮನ್‌ವೆಲ್ತ್ ಗೇಮ್ಸ್‌ ನಲ್ಲಿ ಭಾರತದ ಚಿನ್ನದ ಪದಕಗಳ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ಅದೇ ಹೊತ್ತಿಗೆ ಪದಕ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಆದರೆ ಅಚಂತ ಶರತ್ ಕಮಲ್ 40ರ ಹರೆಯದಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: