ಕ್ರೀಡೆದೇಶಪ್ರಮುಖ ಸುದ್ದಿವಿದೇಶ

ಕಾಮನ್ ವೆಲ್ತ್ ಗೇಮ್ಸ್ : ಬ್ಯಾಡ್ಮಿಂಟನ್‌ ನಲ್ಲಿ ಚಿನ್ನ ಗೆದ್ದ ಸಾತ್ವಿಕ್ಸಾಯಿರಾಜ್ ಮತ್ತು ಚಿರಾಗ್ ಜೋಡಿ

ವಿದೇಶ(ಬರ್ಮಿಂಗ್ಹ್ಯಾಮ್),ಆ.9:- ಕಾಮನ್‌ವೆಲ್ತ್ ಗೇಮ್ಸ್‌ ನಲ್ಲಿ ಭಾರತ ಮಿಂಚು ಹರಿಸಿದೆ. ಭಾರತ ತನ್ನ ಪದಕಗಳ ಸಂಖ್ಯೆಯನ್ನು ನಿರಂತರವಾಗಿ ಹೆಚ್ಚಿಸಿದೆ. ಈ ವರ್ಷ ವಿಶೇಷವಾಗಿ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಬ್ಯಾಡ್ಮಿಂಟನ್‌ನ ಪ್ರದರ್ಶನ ಉತ್ತಮವಾಗಿದೆ. ಪುರುಷರ ಸಿಂಗಲ್ಸ್‌ ನಲ್ಲಿ ಲಕ್ಷ್ಯ ಸೇನ್ ಚಿನ್ನ ಗೆದ್ದ ನಂತರ, ಪುರುಷರ ಡಬಲ್ ಮ್ಯಾಚ್‌ನಲ್ಲೂ ಸಾತ್ವಿಕ್ಸಾಯಿ ರಾಜ್ ಮತ್ತು ಚಿರಾಗ್ ಶೆಟ್ಟಿ ಚಿನ್ನವನ್ನು ಗೆದ್ದುಕೊಂಡಿದ್ದಾರೆ. ಪುರುಷರ ಡಬಲ್ಸ್‌ನ ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್‌ ನ ಬೆನ್ ಲೇನ್ ಮತ್ತು ಸ್ಯಾನ್ ವೆಂಡಿ ಅವರನ್ನು ಸೋಲಿಸಿ ಚಿನ್ನದ ಪದಕ ಗೆದ್ದರು.

ಪುರುಷರ ಡಬಲ್ಸ್‌ ನ ಫೈನಲ್‌ ನಲ್ಲಿ ಚಿನ್ನದ ಪದಕಕ್ಕಾಗಿ ಕಣಕ್ಕೆ ಬಂದಿದ್ದ ಸಾತ್ವಿಕ್ಸಾಯಿ ರಾಜ್ ಮತ್ತು ಚಿರಾಗ್ ಶೆಟ್ಟಿ ಅಮೋಘ ಆಟ ಪ್ರದರ್ಶಿಸಿದರು, ಇಂಗ್ಲೆಂಡ್‌ ನ ಬೆನ್ ಲೇನ್ ಮತ್ತು ಸ್ಯಾನ್ ವೆಂಡಿಗೆ ಒಂದೇ ಒಂದು ಅವಕಾಶ ನೀಡದೇ ಅದ್ಭುತ ಪ್ರದರ್ಶನ ನೀಡಿದರು. ಭಾರತದ ಈ ಸ್ಟಾರ್ ಜೋಡಿ ಮೊದಲ ಸೆಟ್ ಅನ್ನು 21-15 ರಿಂದ ಗೆದ್ದುಕೊಂಡರೆ, ಎರಡನೇ ಸೆಟ್‌ ನಲ್ಲಿ ಇಂಗ್ಲೆಂಡ್ ಜೋಡಿಯನ್ನು 21-13 ರಿಂದ ಸೋಲಿಸಿ ಮತ್ತೊಂದು ಚಿನ್ನದ ಪದಕವನ್ನು ಭಾರತದ ಜೋಳಿಗೆಗೆ ಸೇರಿಸಿದರು. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: