ಕ್ರೀಡೆದೇಶಪ್ರಮುಖ ಸುದ್ದಿವಿದೇಶ

ಕಾಮನ್ ವೆಲ್ತ್ ಗೇಮ್ಸ್ : ಹಾಕಿಯಲ್ಲಿ ಭಾರತದ ಚಿನ್ನದ ಕನಸು ಭಗ್ನ ; ಬೆಳ್ಳಿಗೆ ತೃಪ್ತಿ

ವಿದೇಶ(ಬರ್ಮಿಂಗ್ಹ್ಯಾಮ್),ಆ.9:- ಬರ್ಮಿಂಗ್‌ಹ್ಯಾಮ್ 2022 ಕಾಮನ್‌ವೆಲ್ತ್ ಗೇಮ್ಸ್‌ನ ಪುರುಷರ ಹಾಕಿ ಫೈನಲ್‌ ನಲ್ಲಿ ಆಸ್ಟ್ರೇಲಿಯಾ ಭಾರತವನ್ನು 8-0 ಅಂತರದಿಂದ ಸೋಲಿಸಿತು. ಇಂತಹ ಪರಿಸ್ಥಿತಿಯಲ್ಲಿ ಭಾರತ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು. ಈ ಸೋಲಿನೊಂದಿಗೆ ಭಾರತ ಹಾಕಿ ತಂಡ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು. ಆದರೆ ಆಸ್ಟ್ರೇಲಿಯಾ ಚಿನ್ನದ ಪದಕ ಗೆದ್ದಿದೆ.

ಮೊದಲ ಕ್ವಾರ್ಟರ್‌ ನಲ್ಲಿ ಒಂಭತ್ತನೇ ನಿಮಿಷದಲ್ಲಿ, ಬ್ಲೇಕ್ ಗೋವರ್ಸ್ ಪೆನಾಲ್ಟಿ ಕಾರ್ನರ್‌ ನಿಂದ ಡ್ರ್ಯಾಗ್-ಫ್ಲಿಕ್ ಮೂಲಕ ಗೋಲು ಗಳಿಸಿದರು. ನಂತರ ನಾಥನ್ ಇಫ್ರೋಮ್ಸ್ 14ನೇ ನಿಮಿಷದಲ್ಲಿ ಫೀಲ್ಡ್ ಗೋಲು ಗಳಿಸಿ ಆಸ್ಟ್ರೇಲಿಯಾಕ್ಕೆ 2-0 ಮುನ್ನಡೆ ತಂದುಕೊಟ್ಟರು. ಇದರ ನಂತರ ಎರಡನೇ ಕ್ವಾರ್ಟರ್‌ ನಲ್ಲಿ ಆಸ್ಟ್ರೇಲಿಯಾದ ಮುನ್ನಡೆ 5-0ಗೆ ಏರಿತು. ಇಲ್ಲಿಂದ ಆಸ್ಟ್ರೇಲಿಯಾ ತಂಡ ತನ್ನ ಗೆಲುವನ್ನು ಖಚಿತಪಡಿಸಿಕೊಂಡಿತು.

ಮೂರನೇ ಕ್ವಾರ್ಟರ್‌ ನಲ್ಲಿ ಆಸ್ಟ್ರೇಲಿಯಾ ಇನ್ನೂ ಒಂದು ಗೋಲು ಗಳಿಸಿತು. ಇದರೊಂದಿಗೆ ಅವರ ಮುನ್ನಡೆ 6-0ಗೆ ಏರಿತು. ನಾಲ್ಕನೇ ಕ್ವಾರ್ಟರ್‌ ನ ಆರಂಭದಲ್ಲಿ ಆಸ್ಟ್ರೇಲಿಯಾ ಮತ್ತೊಂದು ಗೋಲು ದಾಖಲಿಸಿತು.

ಭಾರತ ಹಾಕಿ ತಂಡ ಮೂರನೇ ಬಾರಿಗೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಫೈನಲ್ ತಲುಪಿತ್ತು, ಆದರೆ ಮತ್ತೊಮ್ಮೆ ಫೈಲ್‌ ನಲ್ಲಿ ಸೋಲನ್ನು ಎದುರಿಸಬೇಕಾಯಿತು. 2010 ಮತ್ತು 2014ರ ಫೈನಲ್‌ ನಲ್ಲಿಯೂ ಭಾರತ ಹಾಕಿ ತಂಡವನ್ನು ಆಸ್ಟ್ರೇಲಿಯಾ ತಂಡವೂ ಸೋಲಿಸಿತ್ತು. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: