ದೇಶಪ್ರಮುಖ ಸುದ್ದಿಮನರಂಜನೆ

ರಾಣಾ ದಗ್ಗುಬಾಟಿ ವೈವಾಹಿಕ ಜೀವನದಲ್ಲಿ ಬಿರುಕು..?

ದೇಶ(ಆಂಧ್ರಪ್ರದೇಶ),ಆ.09 : `ಬಾಹುಬಲಿ’ ಸಿನಿಮಾದ ಸೂಪರ್ ಸಕ್ಸಸ್ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸ್ಟಾರ್ ನಟ ರಾಣಾ ದಗ್ಗುಬಾಟಿ, ಇದೀಗ ತಮ್ಮ ವೈಯಕ್ತಿಕ ಬದುಕಿನ ವಿಚಾರವಾಗಿ ಸಖತ್ ಸುದ್ದಿಯಾಗಿದ್ದು,  ರಾಣಾ ವೈವಾಹಿಕ ಬದುಕಲ್ಲಿ ಬಿರುಕು ಮೂಡಿದ್ಯಾ ಎಂಬ ಪ್ರಶ್ನೆ ಎದುರಾಗಿದೆ.

ತೆಲುಗಿನ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸುತ್ತಿರುವ ರಾಣಾ ದಗ್ಗುಬಾಟಿ ತಮ್ಮ ಸಂಸಾರಿಕ ಬದುಕಿನ ವಿಚಾರವಾಗಿ ಟಿಟೌನ್‌ನಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ. ಮಿಹಿಕಾ ಬಜಾಜ್ ಮತ್ತು ರಾಣಾ ಮದುವೆಯಾಗಿ ಎರಡು ವರ್ಷಗಳಾಗಿದೆ. ತಮ್ಮ ಮದುವೆ ವಾರ್ಷಿಕೋತ್ಸವದ ವೇಳೆಯಲ್ಲಿ ರಾಣಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ಅಷ್ಟು ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ತಮ್ಮ ಪತ್ನಿ ಮಿಹಿಕಾ ಜತೆಗಿರುವ ಫೋಟೋ ಕೂಡ ಡಿಲೀಟ್ ಮಾಡಿದ್ದಾರೆ.

ತಮ್ಮ ಸಿನಿಮಾ ಪ್ರಚಾರಕ್ಕಾಗಿ ಸದಾ ಇನ್ಸ್ಟಾಗ್ರಾಂನಲ್ಲಿ ಆಕ್ಟೀವ್ ಇರುತ್ತಿದ್ದ ರಾಣಾ, ತಮ್ಮ ಅಭಿಮಾನಿಗಳ ಜತೆಗೂ ಮಾತನಾಡುತ್ತಿದ್ದರು. ಈಗ ದಿಢೀರ್ ಅಂತಾ ತಮ್ಮ ಖಾತೆಯಲ್ಲಿನ ಅಷ್ಟು ಫೋಟೋಗಳನ್ನ ಡಿಲೀಟ್ ಮಾಡಿರುವುದು ನೆಟ್ಟಿಗರ ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ. ಮಿಹಿಕಾ ಜೊತೆ ದಾಂಪತ್ಯ ಜೀವನಕ್ಕೆ ರಾಣಾ ಫುಲ್ ಸ್ಟಾಪ್ ಇಟ್ಟಿದ್ದಾರಾ. ರಾಣಾ ವೈವಾಹಿಕ ಬದುಕಲ್ಲಿ ಬಿರುಕು ಮೂಡಿದ್ಯಾ ಎಂಬ ಪ್ರಶ್ನೆಗೆ, ಸ್ವತಃ ರಾಣಾ ಉತ್ತರಿಸುವವೆರೆಗೂ ಕಾದುನೋಡಬೇಕಿದೆ.(ಎಸ್.ಎಂ)

Leave a Reply

comments

Related Articles

error: