ಸುದ್ದಿ ಸಂಕ್ಷಿಪ್ತ

ವಿಶೇಷ ಚೇತನರಿಂದ ಅರ್ಜಿ ಆಹ್ವಾನ

ಮಡಿಕೇರಿ ಮೇ, 17:-ಪ್ರಸಕ್ತ(2017-18)ನೇ ಸಾಲಿಗೆ ಅನುದಾನಿತ ಕೋರ್ಸ್‍ಗಳಾದ ಆರ್ಕಿಟೆಕ್ಟರ್, ಕಮರ್ಷಿಯಲ್ ಪ್ರಾಕ್ಟೀಸ್, ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್, ಅನುದಾನ ರಹಿತ ಕೋರ್ಸ್‍ಗಳಾದ ಜ್ಯುವೆಲರಿ ಡಿಸೈನ್ ಮತ್ತು ಟೆಕ್ನಾಲಜಿ, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಅಪ್ಲಿಕೇಷನ್ಸ್ ಫಾರ್ ದಿ ವಿಷ್ಯುಯಲಿ ಇಂಪೇರ್ಡ್ ಮೂರು ವರ್ಷಗಳ ಅವಧಿಯ ಡಿಪ್ಲೋಮಾ ಕೋರ್ಸುಗಳ ಪ್ರವೇಶಕ್ಕೆ (ಅಖಿಲ ಭಾರತ ಮಟ್ಟದಲ್ಲಿ) ವಿಶೇಷ ಚೇತನ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.

ಕರ್ನಾಟಕ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ ಶೇ.35 ಅಂಕಗಳೊಂದಿಗೆ ತೇರ್ಗಡೆ ಹಾಗೂ ಮೂಳೆ ಮತ್ತು ಕೀಲು ಶೇ.40 ಮತ್ತು ಮೇಲ್ಪಟ್ಟು, ಕಿವುಡು ಮತ್ತು ಮೂಗು ಅಂಗವಿಕಲತೆ_60 ಡಿಬಿ ಮತ್ತು ಮೇಲ್ಪಟ್ಟು ಹಾಗೂ ಭಾಗಶಃ ಮತ್ತು ಪೂರ್ಣ ಅಂಧತ್ವ ಅಂಗವೈಕಲ್ಯತೆಯ ಲಕ್ಷಣಗಳನ್ನು ಹೊಂದಿರಬೇಕು.

ಜ್ಯುವೆಲರಿ ಡಿಸೈನ್  ಮತ್ತು ಟೆಕ್ನಾಲಜಿ ಕೋರ್ಸಿಗೆ ಸಾಮಾನ್ಯ(ವಿಶೇಷಚೇತನರಲ್ಲದ) ಅಭ್ಯರ್ಥಿಗಳು ಜೆಎಸ್‍ಎಸ್ ಮಹಾವಿದ್ಯಾಪೀಠದ ಯೋಜನೆಯಡಿಯಲ್ಲಿ ಪ್ರವೇಶ ಪಡೆಯಬಹುದು. ಪೂರ್ಣ ಅಂಧತ್ವವುಳ್ಳ ಅಭ್ಯರ್ಥಿಗಳು ಇಂಗ್ಲೀಷ್ ಬ್ರೈಲ್ ಭಾಷೆಯ ಜ್ಞಾನ ಹೊಂದಿದ್ದಲ್ಲಿ ಆದ್ಯತೆಯನ್ನು ನೀಡಲಾಗುವುದು. ಪಾಲಿಟೆಕ್ನಿಕ್‍ನ ಯಶಸ್ವಿ ವಿದ್ಯಾರ್ಥಿಗಳಿಗೆ ಉದ್ಯೋಗ ಮತ್ತು ತರಬೇತಿ ಕೇಂದ್ರದ ಮೂಲಕ ಉದ್ಯೋಗಾವಕಾಶವನ್ನು ಕಲ್ಪಿಸಿಕೊಡಲಾಗುತ್ತದೆ. ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರುಗಳಿಗೆ ಪ್ರತ್ಯೇಕ ವಿದ್ಯಾರ್ಥಿನಿಲಯದ ಸೌಲಭ್ಯ ಕಲ್ಪಿಸಲಾಗಿದೆ(ಸೀಮಿತ ಸೌಲಭ್ಯ).

ಪ್ರವೇಶಕ್ಕೆ ಅರ್ಜಿಗಳನ್ನು ಜೆಎಸ್‍ಎಸ್ ಮಹಾವಿದ್ಯಾಪೀಠ, ಜೆಎಸೆಸ್ ವಿಶೇಷಚೇತನರ ಪಾಲಿಟೆಕ್ನಿಕ್ ಜೆಎಸ್‍ಎಸ್ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಸಮುಚ್ಚಯ, ಮೈಸೂರು-570006 ವಿಳಾಸದಿಂದ (ಸಾಮಾನ್ಯ ವರ್ಗದ ಅಭ್ಯರ್ಥಿಗಳು ರೂ. 100 ಹಾಗೂ ಎಸ್.ಸಿ.ಎಸ್.ಟಿ, ಸಿ-1 ವರ್ಗದವರಿಗೆ ರೂ.50) ನಗದು ಅಥವಾ ಡಿಡಿ/ಎಂಒ ಮೂಲಕ ಮೈಸೂರಿನಲ್ಲಿ ಸಂದಾಯವಾಗುವಂತೆ ಕಳುಹಿಸಿ ಪಡೆಯಬಹುದು ಅಥವಾ ವೆಬ್‍ಸೈಟ್ ಮೂಲಕ ಡೌನ್‍ಲೋಡ್ ಮಾಡಿಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಜೂನ್, 12 ರೊಳಗೆ ಕಚೇರಿಗೆ ಸಲ್ಲಿಸುವಂತೆ ಮೈಸೂರು ಜೆಎಸ್‍ಎಸ್ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಸಮಯಚ್ಚಯ, ಜೆಎಸ್‍ಎಸ್ ವಿಶೇಷಚೇತನರ ಪಾಲಿಟೆಕ್ನಿಕ್‍ನ ಪ್ರಾಂಶುಪಾಲರು ತಿಳಿಸಿದ್ದಾರೆ. (ವರದಿ: ಕೆಸಿಐ, ಎಸ್.ಎಚ್)

Leave a Reply

comments

Related Articles

error: