ನಮ್ಮೂರುಮೈಸೂರು

ಕೊಂಕಣ ಕ್ರಿಶ್ಚಿಯನ್ ಅಸೋಸಿಯೇಶನ್ ನ ಅಧ್ಯಕ್ಷರಾಗಿ ಜಾನ್ ವಿಲಿಯಂ ಡಿಸೋಜಾ ಆಯ್ಕೆ

ಮೈಸೂರು, ಆ.10 : ಮೈಸೂರಿನ ಕೊಂಕಣ ಕ್ರಿಶ್ಚಿಯನ್ ಅಸೋಸಿಯೇಶನ್ ನ ವಾರ್ಷಿಕ ಮಹಾಸಭೆಯು ಭಾನುವಾರ(ಆ.07)ದಂದು ವಿಜಯನಗರದ ಕೊಂಕಣ ಭವನದಲ್ಲಿ ನಡೆದಿದೆ.

ಸಭೆಯಲ್ಲಿ 2022 ರಿಂದ 2024 ರ ಅವಧಿಗೆ ವ್ಯವಸ್ಥಾಪನಾ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಸಮಿತಿಯ ಅಧ್ಯಕ್ಷರಾಗಿ ಜಾನ್ ವಿಲಿಯಂ ಡಿಸೋಜಾ, ಉಪಾಧ್ಯಕ್ಷರಾಗಿ ಸ್ಟ್ಯಾನಿ ಲೋಬೋ, ಮೀನಾ ಡಯಾಸ್, ಪ್ರಧಾನ ಕಾರ್ಯದರ್ಶಿಯಾಗಿ ಜೋಯ್ಸ್ ಸಿಕ್ಟೇರಾ, ಜಂಟಿ ಕಾರ್ಯದರ್ಶಿಗಳಾಗಿ ಸಿಲ್ವೆಸಟರ್ ಡಿ ಮೆಲ್ಲೋ, ಪ್ರಮೀಳಾ ಜೆಸಿಂತಾ, ಖಜಾಂಚಿಯಾಗಿ ಅನಿಲ್ ಸಲ್ಡಾನ್ಹ ಆಯ್ಕೆಯಾಗಿದ್ದಾರೆ.

ಇನ್ನೂ ಸ್ಥಾಯಿ ಸಮಿತಿಯ ಆಂತರಿಕ ಲೆಕ್ಕ ಪರಿಶೋಧಕರಾಗಿ ಆಲ್ಫ್ರೆಡ್ ವಾಜ್, ಸದಸ್ಯರಾಗಿ  ಆನಂದ್ ಪಿಂಟೋ, ವಿನ್ಸೆಂಟ್ ಡಿಸೋಜಾ, ಕೀರ್ತಿದೀಪ್ ಡಿಸೋಜಾ, ಲಾರೆನ್ಸ್ ಪಿರೇರಾ, ಪೌಲ್ ಸಿಕ್ವೇರಾ, ಟೋನಿ ಡಿಸೋಜಾ, ಕ್ಲಿಫರ್ಡ್ ಡಿಸೋಜಾ ನೀಮಕಗೊಂಡಿದ್ದಾರೆ.

Leave a Reply

comments

Related Articles

error: