ಕರ್ನಾಟಕಪ್ರಮುಖ ಸುದ್ದಿ

ಮನೆಯ ಗೋಡೆ ಕುಸಿದು ಯುವಕನ ಸಾವು

ರಾಜ್ಯ(ಹಾವೇರಿ),ಆ.10 : ಮನೆಯ ಗೋಡೆ ಕುಸಿದು ಬಿದ್ದು ಹಿನ್ನಲೆ ಯುವಕ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕುನ್ನೂರು ಗ್ರಾಮದಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನ ಮುಸ್ತಾಕ್ ಯರಗುಪ್ಪಿ(27) ಎಂದು ಗುರುತಿಸಲಾಗಿದ್ದು,  ಜಿಟಿ ಜಿಟಿ ಮಳೆಗೆ ಮನೆ ನೆನೆದು  ಶಿಥಿಲಗೊಂಡಿದ್ದರಿಂದ, ಗೋಡೆ ಕುಸಿದು ಬಿದ್ದು ಈ ದುರ್ಘಟನೆ ನಡೆದಿದೆ. ತಡರಾತ್ರಿ ಮನೆ ಕುಸಿದು ಬಿದ್ದು ಮುಸ್ತಾಕ್‍ಗೆ ಗಂಭೀರವಾಗಿ ಗಾಯವಾಗಿದೆ.

ತಕ್ಷಣ ಕುಟುಂವದವರು ಸ್ಥಳೀಯರ ಸಹಾಯ ತೆಗೆದುಕೊಂಡು ಮುಸ್ತಾಕ್‍ನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮುಸ್ತಾಕ್ ಮೃತಪಟ್ಟಿದ್ದಾನೆ. ಶಿಗ್ಗಾಂವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.(ಎಸ್.ಎಂ)

Leave a Reply

comments

Related Articles

error: