ಮೈಸೂರು

ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಸಂಘಟನೆ ಗಟ್ಟಿಗೊಳಿಸಲು ಸಭೆ

ಮೈಸೂರು,ಆ.10:- ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯಾಧ್ಯಕ್ಷರು ವಿಧಾನ ಪರಿಷತ್ ನ ಸದಸ್ಯರಾದ ಕೆ.ಪಿ.ನಂಜುಂಡಿ ವಿಶ್ವಕರ್ಮ ಅವರ ಹಾಗೂ ರಾಜ್ಯ ಯುವ ಘಟಕದ ಅಧ್ಯಕ್ಷರಾದ ಶ್ರೀನಿವಾಸ್ ಮಳವಳ್ಳಿ ಅವರುಗಳ ಆದೇಶದ ಮೇರೆಗೆ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಮೈಸೂರು ಜಿಲ್ಲಾ ಘಟಕದ ಸಂಘಟನೆಯನ್ನು ಗಟ್ಟಿಗೊಳಿಸುವ ಸಲುವಾಗಿ ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಸಭೆಯನ್ನು ನಡೆಸಲಾಯಿತು.

ಈ ಸಭೆಯಲ್ಲಿ ಮೈಸೂರು ಜಿಲ್ಲಾ ವಿಶ್ವಕರ್ಮ ಮಹಾಸಭಾದ ಸಂಘಟನೆಯ ವಿಚಾರವಾಗಿ ಸುದೀರ್ಘವಾಗಿ ಚರ್ಚಿಸಿ ಹಾಗೂ ಇದೇ ಸಂದರ್ಭದಲ್ಲಿ ಮೈಸೂರು ಜಿಲ್ಲೆಯ ಹೋಬಳಿ ಮಟ್ಟದಿಂದ ತಾಲ್ಲೂಕು, ಜಿಲ್ಲೆ, ನಗರ ಮಟ್ಟದ ವರೆಗೆ ವಿಶ್ವಕರ್ಮ ಸಮಾಜವನ್ನು ಸಂಘಟಿಸುವ ವಿಚಾರವಾಗಿ ನಿರ್ಣಯ ಕೈಗೊಳ್ಳಲಾಯಿತು. ಈ ಸಭೆಗೆ ವಿಶ್ವಕರ್ಮ ಸಮಾಜದ ಯುವಕರು ಭಾಗವಹಿಸಿ ನಾವು ಮುಂದಿನ ದಿನಗಳಲ್ಲಿ ಮಹಾಸಭಾದಿಂದ ಮೈಸೂರು ಜಿಲ್ಲೆಯಾದ್ಯಂತ ಸಂಘಟಿಸಲು ನಾವೆಲ್ಲರೂ ಒಗ್ಗಟ್ಟಿನಿಂದ ತಮ್ಮೊಂದಿಗೆ ದುಡಿಯುತ್ತೇವೆ ಎಂದು ತಿಳಿಸಿದರು .

ಈ ಸಭೆಯಲ್ಲಿ ಮೈಸೂರು ಜಿಲ್ಲಾ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷರಾದ ಬಸವರಾಜು, ಮಹಿಳಾ ಅಧ್ಯಕ್ಷರಾದ ಪುಷ್ಪಲತಾ, ಯುವ ಮುಖಂಡರಾದ ರಿಷಿ ವಿಶ್ವಕರ್ಮ, ಚಿನ್ನ – ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷರಾದ ಆರ್. ಜಯಕುಮಾರ್,ಕೆ. ಆರ್. ನಗರ ವಿಶ್ವಕರ್ಮ ಸಂಘದ ಅಧ್ಯಕ್ಷರಾದ ವೇಣುಗೋಪಾಲ್ ನೇಗಿಲಮನೆ, ವಿಶ್ವಕರ್ಮ ಅಭಿವೃದ್ಧಿ ನಿಗಮದ ನಿರ್ದೇಶಕರು ಹಾಗೂ ಯುವ ಘಟಕದ ಅಧ್ಯಕ್ಷರಾದ ಲೋಕೇಶ್ ಸಿಂಧುವಳ್ಳಿ,ತಾಲೂಕು ಅಧ್ಯಕ್ಷರುಗಳಾದ ಹುಣಸೂರು ತಾಲೂಕು ರೇವಣ್ಣ ,ಕೆ ಆರ್ ನಗರ ತಾಲೂಕು ಪುಟ್ಟಸ್ವಾಮಾಚಾರ್ , ಎಚ್. ಡಿ. ಕೋಟೆ ತಾಲೂಕು ಹೊಸಹೊಳಲು ಸಿದ್ದಪ್ಪಾಜಿ ,ನಂಜನಗೂಡು ತಾಲ್ಲೂಕು ಚಂದ್ರು , ಯು .ಘಟಕದ ಅಧ್ಯಕ್ಷರಾದ ಎಚ್.ಡಿ .ಕೋಟೆ ನಾಗೇಶ್ , ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕರು ಜಯಪುರ ಬಸವರಾಜ್ ,ಹಿರಿಯ ಮುಖಂಡರಾದ ಅರ್ಕೇಶ್ವರಚಾರ್ , ನಾಗಮ್ಮ ,ವಿಶ್ವಕರ್ಮ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕರು ಹುಲ್ಲಹಳ್ಳಿಯ ನರಸಿಂಹಸ್ವಾಮಿ , ಹೆಬ್ಬಾಳ ಹಿರಿಯ ಮುಖಂಡರಾದ ಈಶ್ವರಾಚಾರ್ ಹಾಗೂ ಮಂಜು ವಿಶ್ವಕರ್ಮ , ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಯಶಂಕರ್ , ಸಿದ್ದಪ್ಪಾಜಿ ಕೇರ್ಗಳ್ಳಿ , ಕಡಕೋಳ ಮಹೇಶ್ , ನಟರಾಜು ಮರಳೂರು,ಗೊದ್ದನಪುರ ಹುಂಡಿ ಮಹೇಶ್ ,ಕಾಳಿಕಾಂಬ ದೇವಸ್ಥಾನ ಸಮಿತಿಯ ಕಾರ್ಯದರ್ಶಿಗಳಾದ ವಸಂತ ಕುಮಾರ್ ,ನಿರ್ದೇಶಕರಾದ ಅರುಣ್ , ಲಯನ್ಸ್ ಕ್ಲಬ್ ಅಧ್ಯಕ್ಷರಾದ ಸುರೇಶ್ ಗೋಲ್ಡ್ ಕೆ ಟಿ ಸ್ಟ್ರೀಟ್, ಟೈಲರ್ ರವಿ ಕುಮಾರ್ ,ಹುಣಸೂರು ನಾರಾಯಣಾಚಾರ್ ,ಮಾಯಗೌಡನಹಳ್ಳಿ ಶಂಕರಾಚಾರ್ ,ಕಪ್ಪಡಿ ವೆಂಕಟೇಶಾಚಾರ್ , ಹೆಬ್ಬಾಳ್ ಸಿದ್ದಪ್ಪಾಜಿ , ಕೆಂಪರಾಜು , ಕಲ್ಲಡ್ಕ ಗ್ರಾಮದ ಚಲುವ ಆಚಾರ್, ಜಲೇಂದ್ರ , ನಂಜನಗೂಡು ಶಶಿಕುಮಾರ್,ಈಶ್ವರ್ ,ಸಾಲುಂಡಿ ಸಣ್ಣಸ್ವಾಮಿ ,ಸಿದ್ದಪ್ಪಾಜಿ ಮಹದೇಶ್ವರ ಬಡಾವಣೆ , ಮಲ್ಕುಂಡಿ ಪ್ರಕಾಶಾಚಾರಿ ,ಕಾಳಿಸಿದ್ದನಹುಂಡಿ ರವಿ ಹಾಗೂ ಸಮಾಜದ ಮುಖಂಡರು ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: