ಕರ್ನಾಟಕಪ್ರಮುಖ ಸುದ್ದಿ

28 ವರ್ಷಗಳ ಜೈಲು ವಾಸದ ನಂತರ ವ್ಯಕ್ತಿಯ ಬಿಡುಗಡೆಗೆ ತೀರ್ಮಾನ : ಕುಟುಂಬಸ್ಥರಿಂದಲೇ ವಿರೋಧ : ಗೃಹ ಸಚಿವರ ನೇತೃತ್ವದ್ದಲ್ಲಿ ಮಹತ್ವದ ಸಭೆ

ರಾಜ್ಯ(ಬೆಂಗಳೂರು),ಆ.10 : 90ರ ದಶಕದಲ್ಲಿ ಕರಾವಳಿಯನ್ನು ಬೆಚ್ಚಿಬೀಳಿಸಿದ್ದ ಕೊಲೆ ಪ್ರಕರಣದಲ್ಲಿ ಸುದೀರ್ಘ 28 ವರ್ಷಗಳ ಜೈಲು ವಾಸದಲ್ಲಿದ್ದ ಪ್ರವೀಣ್ ಕುಮಾರ್ ಎಂಬಾತ ಬಿಡುಗಡೆಯಾಗುತ್ತಿದ್ದಾನೆ. ಆದರೆ ಆತನ ಕುಟುಂಬಸ್ಥರೇ ಅಪರಾಧಿಯನ್ನು ಬಿಡುಗಡೆ ಮಾಡದಂತೆ ಸರ್ಕಾರಕ್ಕೆ ಮನವಿ ಮಾಡಿದ್ದು, ಈ ಬಗ್ಗೆ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ಕರೆದಿದ್ದೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಪ್ರವೀಣ್ ಕುಟುಂಬಸ್ಥರು ಇಂದು ಆರಗ ಜ್ಞಾನೇಂದ್ರ ಅವರನ್ನು ಭೇಟಿಯಾಗಿ ಪ್ರವಿಣ್ ಕುಮಾರ್ ನನ್ನು ಬಿಡುಗಡೆ ಮಾಡದಂತೆ ಮನವಿ ಸಲ್ಲಿಸಿದ್ದಾರೆ. ಈ ವೇಳೆ ಸಚಿವ ಆರಗ ಜ್ಞಾನೇಂದ್ರ ಮಾಧ್ಯಮದೊಂದಿಗೆ ಮಾತನಾಡಿ,  ಪ್ರವೀಣ್‍ನಿಗೆ 14 ವರ್ಷದ ಹಿಂದೆ ಶಿಕ್ಷೆ ಆಗಿದೆ. ಮೊದಲು ಗಲ್ಲುಶಿಕ್ಷೆ ಆಗಿತ್ತು. ಬಳಿಕ ಸುಪ್ರೀಂ ಕೋರ್ಟ್ ಜೀವಾವಧಿ ಶಿಕ್ಷಗೆ ಬದಲಾವಣೆ ಮಾಡಿತ್ತು. ರಾಷ್ಟ್ರಪತಿಗಳು ಅದನ್ನು ಎತ್ತಿ ಹಿಡಿದಿದ್ದರು. ಅಪರಾಧಿಯ ಹಿನ್ನೆಲೆ ಈಗ ನಮಗೆ ಗೊತ್ತಾಗ್ತಿದೆ. ಅವರ ಮನೆಯವರು ಬಂದಿದ್ದಾರೆ. ಯಾವುದೇ ಕಾರಣಕ್ಕೂ ಅವರನ್ನು ಬಿಡುಗಡೆ ಮಾಡಬೇಡಿ ಎಂದಿದ್ದಾರೆ.

ಹೊರಗೆ ಬಂದ್ರೆ ಮತ್ತೆ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ ಎಂದಿದ್ದಾರೆ. ಬೆಳಗಾವಿ ಜೈಲಿನಿಂದ ಕೋರ್ಟ್‍ಗೆ ಬರೋವಾಗ ಈತ ಹಿಂದೆ ತಪ್ಪಿಸಿಕೊಂಡು ಹೋಗಿದ್ದ. ಗೋವಾದಲ್ಲಿ ಮದುವೆಯಾಗಿ ಮಗು ಕೂಡ ಇತ್ತು ಎಂದು ಕುಟುಂಬದವರು ಹೇಳಿದ್ದಾರೆ. ಹಳೆಯ ಕೇಸ್‌ನಲ್ಲಿ 14 ವರ್ಷ ಈತನಿಗೆ ಸನ್ನಡತೆ ಇದೆ. ಹೀಗಾಗಿ ಆತನನ್ನು ಬಿಡುಗಡೆ ಮಾಡುವ ಪ್ರಸ್ತಾಪ ಬಂದಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಇದೊಂದು ವಿಶೇಷ ಕೇಸ್. ಇಂದು ಅಧಿಕಾರಿಗಳ ಸಭೆ ಕರೆದಿದ್ದೇನೆ. ಕಾನೂನಿನ ಪ್ರಕಾರ ಏನು ಮಾಡಲು ಸಾಧ್ಯವೋ ಅದನ್ನು ಮಾಡ್ತೀವಿ. ಎರಡು ಕುಟುಂಬಕ್ಕೆ ಭದ್ರತೆ ಕೊಡ್ತೀವಿ. ಕಳೆದ ಕ್ಯಾಬಿನೆಟ್‍ನಲ್ಲಿ ಕೊಲೆ ಮಾಡಿದವರಿಗೆ, ರೇಪ್ ಮಾಡಿದವರನ್ನು ಬಿಡಬಾರದು ಎಂದು ನಿಯಮ ಮಾಡಿದ್ದೇವೆ. ಇನ್ನು ಮೇಲೆ ಇಂತಹ ಕೇಸ್‍ನಲ್ಲಿ ಅಪರಾಧಿಯನ್ನು ಬಿಡುಗಡೆ ಮಾಡುವುದಿಲ್ಲ. ಹಿಂದಿನ ನಿಯಮದ ಪ್ರಕಾರ ಈತನಿಗೆ ಬಿಡುಗಡೆಗೆ ಶಿಫಾರಸು ಬಂದಿದೆ. ಇವತ್ತು ಅಧಿಕಾರಿಗಳ ಸಭೆ ಮಾಡಿ ಅಂತಿಮ ನಿರ್ಧಾರ ಮಾಡ್ತೀವಿ. 4 ಜನರನ್ನು ಕೊಂದಿದ್ದಾನೆ. ಅವನು ಸೈಕೋ ಅನ್ನಿಸುತ್ತದೆ ಎಂದಿದ್ದಾರೆ.(ಎಸ್.ಎಂ)

Leave a Reply

comments

Related Articles

error: