ಮೈಸೂರು

ಜವಾಬ್ದಾರಿ ಮರೆತು ರಸ್ತೆಯನ್ನೇ ಕಸದ ಬುಟ್ಟಿ ಮಾಡಿದ ಯುವ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು

ಮೈಸೂರು,ಮೇ.17:- ಮೈಸೂರು ಮಹಾನಗರಪಾಲಿಕೆ ಈ ಬಾರಿ ಸ್ವಚ್ಛ ನಗರಿ ಪಟ್ಟದಿಂದ ವಂಚಿತವಾಗಿದೆ. ಅದನ್ನು ಮತ್ತೆ ಪಡೆಯಬೇಕೆನ್ನುವ ಹಂಬಲ ಎಲ್ಲರಲ್ಲಿಯೂ ಇರುವುದು ಸಹಜ. ಆದರೆ ರಾಷ್ಟ್ರೀಯ ಪಕ್ಷವೆಂದು ಗುರುತಿಸಿಕೊಂಡ ಕಾಂಗ್ರೆಸ್ ನ ಅದರಲ್ಲೂ ಯುವ ಕಾಂಗ್ರೆಸ್ ಸಮಿತಿ ಜೆ.ಎಲ್.ಬಿ. ರಸ್ತೆಯ ಬಳಿ ಇರುವ ರಸ್ತೆಯಲ್ಲಿಯೇ ಪೇಪರ್ ಗಳನ್ನು ಹರಿದು ಹಾಕಿ ಗಬ್ಬೆಬ್ಬಿಸಿದ್ದಾರಲ್ಲದೇ, ರಸ್ತೆಯನ್ನೇ ಕಸದಬುಟ್ಟಿಯನ್ನಾಗಿಸಿಕೊಂಡಿರುವಂತಿದೆ. ಕಾಲಿರಿಸಿದಲ್ಲೇಲ್ಲ ಸಿಗುವ ಪೇಪರ್ ತುಂಡುಗಳು ದಾರಿಹೋಕರಲ್ಲಿ ಆಕ್ರೋಶ ಮೂಡಿಸಿದೆ.

ಮಂಗಳವಾರ ಜೆ.ಎಲ್.ಬಿ.ರಸ್ತೆಯಲ್ಲಿರುವ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ-2017ಕ್ಕೆ ಚುನಾವಣೆ ನಡೆದಿತ್ತು. ಚುನಾವಣೆ ಪ್ರಯುಕ್ತ ತಂದ ಪಾಂಪ್ಲೆಟ್ ಹಾಗೂ ಕೆಲವು ರದ್ದಿ ಪೇಪರ್ ಗಳನ್ನೆಲ್ಲ ಚಿಂದಿ ಮಾಡಿ ಕಾಲೇಜು ಬಳಿಯೇ ಬಿಸಾಡಲಾಗಿದೆ. ಜನತೆ ಈ ಮಾರ್ಗವಾಗಿ ಬರುವಾಗ ಅಸಹ್ಯ ಪಟ್ಟು ನಡೆಯಬೇಕು. ನಗರವನ್ನು ಈ ರೀತಿ ಇರಿಸಿಕೊಂಡರೆ ಕೊನೆಯ ಸ್ಥಾನವೂ ಸಿಗದಂತಾಗುತ್ತದೆ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿ ಬಂತು. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ನಡೆದುಕೊಳ್ಳುವುದು ಎಷ್ಟು ಸರಿ, ಇದಕ್ಕೆ ಯಾರು ಹೊಣೆ ಎಂಬ ಮಾತುಗಳು ಕೇಳಿ ಬಂದಿವೆ. – (ವರದಿ: ಕೆ.ಎಸ್,ಎಸ್.ಎಚ್)

Leave a Reply

comments

Related Articles

error: