ಕರ್ನಾಟಕಪ್ರಮುಖ ಸುದ್ದಿ

ಆಗಸ್ಟ್ 15ರಂದು ಬಿಎಂಟಿಸಿಯ ಎಲ್ಲಾ ಬಸ್‍ಗಳಲ್ಲೂ ಉಚಿತವಾಗಿ ಪ್ರಯಾಣ

ರಾಜ್ಯ(ಬೆಂಗಳೂರು),ಆ.11 : ಆಗಸ್ಟ್ 15ರಂದು ಪ್ರಯಾಣಿಕರಿಗೆ ಬಿಎಂಟಿಸಿ ಗುಡ್ನ್ಯೂಸ್ ನೀಡಿದ್ದು, ಇಡೀ ದಿನ ಬೆಂಗಳೂರಿನಾದ್ಯಂತ ಪ್ರಯಾಣಿಕರು  ಬಿಎಂಟಿಸಿಯ ಎಲ್ಲಾ ಬಸ್ಗಳಲ್ಲೂ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಿದೆ.

75ನೇ ಸ್ವತಂತ್ರ ಭಾರತದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಬಿಎಂಟಿಸಿ ಘೋಷಣೆಯನ್ನು ಮಾಡಿದೆ. ಅಗಸ್ಟ್ 15ರಂದು 24 ಗಂಟೆಗಳ ಕಾಲ ಎಲ್ಲಾ ಬಿಎಂಟಿಸಿ ಬಸ್ನಲ್ಲೂ ಪ್ರಯಾಣಿಕರು ಉಚಿತವಾಗಿ ಸಂಚರಿಸಲು ಸರ್ಕಾರ ಒಪ್ಪಿಗೆ ಸೂಚಿಸಿದೆ. ಹಿನ್ನೆಲೆಯಲ್ಲಿ ಬಿಎಂಟಿಸಿ ಅಧಿಕೃತವಾಗಿ ಘೋಷಣೆ ಮಾಡಿದ್ದು, ಒಟ್ಟಾರೆಯಾಗಿ ಬಿಎಂಟಿಸಿಗೆ 3 ಕೋಟಿ ರೂ. ಹೊರೆ ಬೀಳಲಿದೆ.

ಇನ್ನೂ 75ನೇ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಆಗಸ್ಟ್ 14ರಂದು 75 ಎಲೆಕ್ಟ್ರಿಕ್ ಬಸ್ ಲೋಕಾರ್ಪಣೆ ಮಾಡಲಾಗಿದೆ. ಈಗಾಗಲೇ ಬೆಂಗಳೂರಿನಾದ್ಯಂತ 90 ಎಲೆಕ್ಟ್ರಿಕ್ ಬಸ್ಗಳು ಕಾರ್ಯಾಚರಣೆ ನಡೆಸುತ್ತಿವೆ. ಈಗ ಅದರ ಜೊತೆಗೆ ಹೊಸ 75 ಎಲೆಕ್ಟ್ರಿಕ್ ಬಸ್ ಸೇರ್ಪಡೆಯಾಗಲು ಸಿದ್ಧವಾಗಿದೆ.(ಎಸ್.ಎಂ)

Leave a Reply

comments

Related Articles

error: