ಕರ್ನಾಟಕಪ್ರಮುಖ ಸುದ್ದಿ

ದೇಶಿ ಗೋ ತಳಿ ರೈತರಿಗೆ ಒಂದು ವರದಾನ ; ಕಣೇರಿಮಠದ ಅದೃಷ್ಯ ಕಾಡಸಿದ್ದೇಶ್ವರ ಸ್ವಾಮೀಜಿ

ರಾಜ್ಯ(ಬೆಳಗಾವಿ),ಆ.11 : ರೈತರ ಜೀವನಾಡಿ ದೇಶೀ ಗೋ ತಳಿ ಹೇಳ ಹೆಸರಿಲ್ಲದೆ ನೆಪ್ಪತ್ಯಕ್ಕೆ ಸರಿಯುತ್ತಿವೆ. ಹೀಗಾಗಿ ದೇಶಿ ಗೋ ತಳಿ ಸಂವರ್ಧನೆ ಹಾಗೂ ಸಾವಯವ ಕೃಷಿಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನ ಮಾಡಬೇಕಾಗಿದೆ ಎಂದು ಕಣೇರಿಮಠದ ಅದೃಷ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದ್ದಾರೆ.

ಬೆಳಗಾವಿ ಜಿಲ್ಲೆ ರಾಯಬಾಗ ಪಟ್ಟಣದಲ್ಲಿ ಪ್ಯಾನ್ ಪೆನೆಲ್ ಶುಗರ್ಸ್ ಸಂಸ್ಥೆಯ ವತಿಯಿಂದ ಸಾವಯವ ಕೃಷಿ ಉತ್ಸವ, ದೇಶಿ ತಳಿ ಹಸು ಸಂವರ್ಧನೆ ಕಾರ್ಯಕ್ರಮ ಹಾಗೂ ಕೃಷಿ ಇಲಾಖೆಯಿಂದ ಕೃಷಿ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಕಣೇರಿಮಠದ ಅದೃಷ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ದೇಶಿ ಗೋ ಸಾಕಾಣಿಕೆ ಕಡಿಮೆಯಾಗಿದೆ. ಆ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಮನೆ ಮನೆಯಲ್ಲಿ ದೇಶಿ ಗೋವುಗಳ ಸಾಕಾಣಿಕೆ ಮಾಡಬೇಕು. ಅದರಿಂದ ಒಂದು ಕುಟುಂಬ ಜೀವನ ನಡೆಸಬಹುದು. ಅಲ್ಲದೇ ಗೋಮಯ, ಗೋಮೂತ್ರ ಹಾಲು ಮೊಸರು ಮಜ್ಜಿಗೆ ಮನುಷ್ಯನ ಆರೋಗ್ಯ ಪ್ರಕೃತಿ ಜೊತೆಗೆ ಕೃಷಿಯಲ್ಲೂ ಕೂಡ ಹಸುವಿನ ಸೆಗಣಿ, ಮೂತ್ರದಿಂದ ಗೋ ಕೃಪಾಮೃತ ತಯಾರಿಸಬಹುದು. ಪ್ರತಿಯೊಬ್ಬ ರೈತರು ತಮ್ಮ ಮನೆಯಲ್ಲಿ ಒಂದು ದೇಶಿ ಹಸು ಸಾಕಬೇಕು. ಇದರಿಂದ ಮನೆಯ ಜನರ ಆರೋಗ್ಯದ ಜೊತೆಗೆ ಭೂಮಿಯ ಆರೋಗ್ಯ ಕಾಪಾಡುವುದು ಎಂದು ಹೇಳಿದ್ದಾರೆ.

ದೇಶಿ ತಳಿ ಆಕಳು ಸಾಕುವುದರಿಂದ ತುಂಬ ಪ್ರಯೋಜನ ಇದೆ. ಗೋವಿನ ಸಂರಕ್ಷಣೆಯಿಂದ ಮಣ್ಣಿನ ಫಲವತ್ತತೆ ಹೆಚ್ಚಾಗಲೂ ಸಹಕಾರಿಯಾಗುತ್ತದೆ. ಚಿಕ್ಕೋಡಿ ಉಪವಿಭಾಗದಲ್ಲಿ ಜನರು ಹೆಚ್ಚಾಗಿ ಕಬ್ಬು ಬೆಳೆಯುವುದರಿಂದ ಮತ್ತು ಕೆಮಿಕಲ್ ಗೊಬ್ಬರ ಉಪಯೋಗ ಮಾಡುವುದರಿಂದ ಮಣ್ಣು ಫಲವತ್ತತೆ ಕಳೆದುಕೊಂಡಿದೆ. ಆದರೆ ಜನರು ಬೇಗನೆ ಬೆಳೆ ಲಾಭಕ್ಕಾಗಿ ಕೆಮಿಕಲ್ ಬಳಸಿ ಬೆಳೆ ಬೆಳೆಯುತ್ತಾರೆ. ಆದರೆ ಅದೇ ಗೋವಿನ ಗೊಬ್ಬರ ಬಳಸುವುದರಿಂದ ಮಣ್ಣಿನಲ್ಲಿ ಫಲವತ್ತತೆ ಹೆಚ್ಚಾಗುತ್ತದೆ. ಆದರೆ ಅದಕ್ಕೆ ಸ್ವಲ್ಪ ಸಮಯ ತಗೆದುಕೊಳ್ಳುತ್ತದೆ. ಅದರಿಂದ ಭವಿಷ್ಯದಲ್ಲಿ ತುಂಬಾ ಪ್ರಯೋಜನಗಳಿವೆ. ಹಾಗಾಗಿ ಈಗಿನ ರೈತಾಪಿ ವರ್ಗದ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಇವತ್ತು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಅಂತ ಕಾರ್ಯಕ್ರಮ ಆಯೋಜಕ ವಿವೇಕರಾವ್ ಪಾಟೀಲ್ ತಿಳಿಸಿದ್ದಾರೆ.

ಒಟ್ಟಿನಲ್ಲಿ ದೇಶಿ ಗೋವುಗಳು ರೈತರಿಗೆ ವರದಾನವಿದ್ದಂತೆ. ಅವು ರೈತರಿಗೆ ಗೊಬ್ಬರ, ಉರುವಲು ಕೃಷಿ, ಔಷಧ, ಉಳುಮೆ.. ಹೀಗೆ ನಾನಾ ರೀತಿಯಲ್ಲಿ ಉಪಯುಕ್ತವಾಗಿವೆ. ಇಷ್ಟೆಲ್ಲಾ ಲಾಭವಿರುವ ಭಾರತೀಯ ಗೋವುಗಳ ಸಾಕಾಣಿಕೆ ಬಗ್ಗೆ ರೈತರಲ್ಲಿ ಆಸಕ್ತಿ ಕಡಿಮೆಯಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಆದರೆ ಇಂತಹ ಒಳ್ಳೆಯ ಕಾರ್ಯಕ್ರಮಗಳ ಮೂಲಕ ಈಗಿನ ರೈತಾಪಿ ವರ್ಗದಲ್ಲಿ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳು ಹೆಚ್ಚಾಗಬೇಕಿದೆ. ಅಲ್ಲದೇ ಸರ್ಕಾರ ಕೂಡ ದೇಶಿ ಗೋವುಗಳ ಸಾಕಾಣಿಕೆಯನ್ನು ಪ್ರೋತ್ಸಾಹಿಸಲು ಮುಂದೆ ಬರಬೇಕಿದೆ ಎಂದಿದ್ದಾರೆ.(ಎಸ್.ಎಂ)

Leave a Reply

comments

Related Articles

error: