ಕರ್ನಾಟಕಪ್ರಮುಖ ಸುದ್ದಿ

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ವಿಕಲಚೇತನರ ಬೈಕ್ ರ್ಯಾಲಿ

ರಾಜ್ಯ (ದಾವಣಗೆರೆ) ಆ.12:- ನಗರದ ಜಿಲ್ಲಾಡಳಿತದ ಆವರಣದಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ “ವಿಕಲಚೇತನರ ಬೈಕ್ ರ್ಯಾಲಿ”ಗೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರು ಚಾಲನೆ ನೀಡಿದರು.

ಈ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ವಾಸಂತಿ ಉಪ್ಪಾರ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಲ್ಯಾಣಾಧಿಕಾರಿ ಕೆ.ಕೆ ಪ್ರಕಾಶ್, ಪೊಲೀಸ್ ಅಧಿಕಾರಿ ನಾಗರಾಜ ಸೇರಿದಂತೆ ಇತರರು ಹಾಜರಿದ್ದರು.(ಜಿ ಕೆ, ಎಸ್. ಎಚ್)

Leave a Reply

comments

Related Articles

error: