ಕರ್ನಾಟಕಪ್ರಮುಖ ಸುದ್ದಿ

ಜಂತುಹುಳು ನಿವಾರಣೆಯಿಂದ ಉತ್ತಮ ಆರೋಗ್ಯ ಸಾಧ್ಯ : ಸಿಇಓ ಎಂ.ಎಲ್.ವೈಶಾಲಿ

ರಾಜ್ಯ (ಶಿವಮೊಗ್ಗ), ಆ. 12:- ಜಂತು ಹುಳುವಿನಿಂದಾಗಿ ರಕ್ತ ಹೀನತೆ ಉಂಟಾಗಿ ಆರೋಗ್ಯದಲ್ಲಿ ಸಮರ್ಪಕ ಬೆಳವಣಿಗೆ ಆಗುವುದಿಲ್ಲ. ಅದ್ದರಿಂದ ಜಂತುಹುಳು ಮಾತ್ರೆಗಳನ್ನು ಸರಿಯಾಗಿ ಸೇವಿಸಿ ಜಂತು ಹುಳಗಳನ್ನು ನಿವಾರಣೆ ಮಾಡಿದರೆ ಮಾತ್ರ ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ ಅವರು ಹೇಳಿದರು.

ಅವರು ನಗರದ ಗಾಡಿಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸರ್ಕಾರಿ ಪ್ರೌಢಶಾಲೆಯಲ್ಲಿ ಅಯೋಜಿಸಲಾದ ರಾಷ್ಟಿçÃಯ ಜಂತುಹುಳು ನಿವಾರಣಾ ದಿನವನ್ನು ಉದ್ಘಾಟಿಸಿ ಮಾತನಾಡಿದರು.

ರಕ್ತ ಹೀನತೆಯು ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರಲ್ಲಿ ಹೆಚ್ಚಾಗಿದ್ದು, ಸೂಕ್ತವಾಗಿ ಜಂತುಹುಳು ಮಾತ್ರೆ ಸೇವಿಸುವ ಮೂಲಕ ರಕ್ತಹೀನತೆಯನ್ನು ತಡೆಗಟ್ಟಬಹುದು. ಮಕ್ಕಳು ಶುಚಿತ್ವವನ್ನು ಕಾಯ್ದುಕೊಳ್ಳುವುದು ಅತಿ ಮುಖ್ಯ. ಉಗುರು ನಿಯಮಿತವಾಗಿ ಕತ್ತರಿಸಿ, ಆಹಾರ ಸೇವಿಸುವ ಸಂದರ್ಭದಲ್ಲಿ ಕೈಯನ್ನು ಸರಿಯಾಗಿ ತೊಳೆಯುವ ಮೂಲಕ ಸ್ವಚ್ಛತೆಯನ್ನು ಕಾಪಾಡಬೇಕು ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪರಮೇಶ್ವರಪ್ಪ ಅವರು ಮಾತನಾಡಿ, ಜಂತುಹುಳು ಮಾತ್ರೆಯನ್ನು 6 ತಿಂಗಳಿಗೊಮ್ಮೆ ಸೇವಿಸಿದರೆ ನಮ್ಮ ದೇಹದಲ್ಲಿರುವ ಜಂತುಹುಳುಗಳನ್ನು ಸಂಪೂರ್ಣ ನಿರ್ಮೂಲನೆ ಸಾಧ್ಯವಿದೆ. ಮಾತ್ರೆ ಸೇವಿಸುವುದರಿಂದ ಒಂದು ವೇಳೆ ಹೊಟ್ಟೆ ನೋವು ಕಾಣಿಸಿಕೊಂಡರೆ ನಿಮ್ಮ ಶಾಲಾ ಶಿಕ್ಷಕರಿಗೆ ತಿಳಿಸಬೇಕು. ಜಿಲ್ಲೆಯಾದ್ಯಂತ ಅಂಗನವಾಡಿ, ಶಾಲೆಗಳಲ್ಲಿ ಮತ್ತು ಪದವಿ ಪೂರ್ವ ಕಾಲೇಜು ಸೇರಿದಂತೆ 01ರಿಂದ 19 ವರ್ಷದ ಮಕ್ಕಳಿಗೆ ಉಚಿತವಾಗಿ ಜಂತುಹುಳು ಮಾತ್ರೆಗಳನ್ನು ನೀಡಲಾಗುವುದು. ಇದರ ಉಪಯೋಗವನ್ನು ಎಲ್ಲರು ಪಡೆದುಕೊಳ್ಳಬೇಕು ಎಂದರು.

ಎಂ.ಎಲ್.ವೈಶಾಲಿ ಅವರು ಮಕ್ಕಳಿಗೆ ಜಂತು ಹುಳು ಮಾತ್ರೆ ನೀಡುವ ಮೂಲಕ ದಿನಾಚರಣೆಗೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಚಂದ್ರಪ್ಪ, ಆರ್‌ಸಿಎಚ್‌ಓ ಡಾ. ನಾಗರಾಜ ನಾಯ್ಕ್ ಎಲ್ , ಎಫ್,ಡಬ್ಲೂ.ಓ ಡಾ. ಮಂಜುನಾಥ್ ನಾಗಲಿಕರ್, ಡಾ.ಉಮಾ ಹೆಚ್,ಎಂ ಹನುಮಂತಪ್ಪ, ಶ್ರೀಮತಿ ಭುವನೇಶ್ವರಿ, ಡಿಎಸ್‌ಓ ಡಾ.ಮಲ್ಲಪ್ಪ, ಟಿಹೆಚ್‌ಓ ಡಾ.ಚಂದ್ರಶೇಖರ್ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.(ಜಿ. ಕೆ, ಎಸ್. ಎಚ್)

Leave a Reply

comments

Related Articles

error: