ಕರ್ನಾಟಕಪ್ರಮುಖ ಸುದ್ದಿ

ಹರ್ ಘರ್ ತಿರಂಗಾ : ನಿವಾಸದ ಮೇಲೆ ಕುಟುಂಬ ಸದಸ್ಯರೊಂದಿಗೆ ಧ್ವಜ ಹಾರಿಸಿದ ಸಿಎಂ

ಅಂಗಾಂಗ ದಾನಕ್ಕೆ ಸಿಎಂ ಸಹಿ

ಮೈಸೂರು,ಆ.13:- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸುಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ “ಮನೆ ಮನೆಯಲ್ಲೂ ತ್ರಿವರ್ಣ ಧ್ವ” ಅಭಿಯಾನದ ಅಂಗವಾಗಿ ಅವರ ನಿವಾಸದ ಮೇಲೆ ಕುಟುಂಬ ಸದಸ್ಯರೊಂದಿಗೆ ರಾಷ್ಟ್ರ ಧ್ವಜ ಹಾರಿಸಿದರು.

75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೇಶಾದ್ಯಂತ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಲಾಗುತ್ತಿದ್ದು, ಇಂದಿನಿಂದ ಹರ್ ಘರ್ ತಿರಂಗಾ ಅಭಿಯಾನ ಆರಂಭವಾಗಿದೆ.

ಹರ್ ಘರ್ ಅಭಿಯಾನ ಚಾಲನೆ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಹರ್ ಘರ್ ಅಭಿಯಾನ ಯಶಸ್ವಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಧ್ವಜ ವಿತರಣೆ ಮಾಡಲಾಗಿದೆ. ಈಗಾಗಲೇ 1 ಕೋಟಿ 8 ಲಕ್ಷ ಧ್ವಜ ವಿತರಿಸಿದ್ದೇವೆ ಎಂದರು.

ಇಂದು ವಿಶ್ವ ಅಂಗಾಂಗ ದಿನ ಹಿನ್ನೆಲೆ ನಾವು ಸತ್ತ ಮೇಲೂ ನಮ್ಮ ಅಂಗಾಂಗ ದಾನ ಮಾಡಬೇಕು. ಪುನೀತ್ ರಾಜ್ ಕುಮಾರ್ ಅವರು ಅಂಗಾಂಗ ದಾನ ಮಾಡಿದ್ದರು. ಅಪ್ಪು ನಾಲ್ಕು ಜನರಿಗೆ ದೃಷ್ಟಿ ನೀಡಿದ್ದಾರೆ. ಸಾಧಕನಿಗೆ ಸಾವಿಲ್ಲ. ಸಾವಿನ ನಂತರವೂ ಬದುಕಬಹುದು. ಯುವಕರೆಲ್ಲಾ ಅಂಗಾಂಗ ದಾನ ಮಾಡಬೇಕು. ನಾನೂ ಕೂಡ ಅಂಗಾಂಗ ದಾನಕ್ಕೆ ಸಹಿ ಹಾಕಿದ್ದೇನೆ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: