ಕರ್ನಾಟಕಪ್ರಮುಖ ಸುದ್ದಿಮನರಂಜನೆ

ಕಿರುತೆರೆಯಲ್ಲಿ ತೆರೆ ಕಾಣಲು ಸಿದ್ಧವಾಗಿರುವ ಕೆಜಿಎಫ್ 2

ರಾಜ್ಯ(ಕೊಪ್ಪಳ),ಆ.13 : ಭಾರತೀಯ ಸಿನಿಮಾ ರಂಗದಲ್ಲಿ ಸರ್ವ ದಾಖಲೆಗಳನ್ನು ಪುಡಿ ಪುಡಿ ಮಾಡಿ, ಕನ್ನಡ ಸಿನಿಮಾ ರಂಗವನ್ನು ಮತ್ತೊಂದು ಹಂತಕ್ಕೆ ತಗೆದುಕೊಂಡು ಹೋದ ಕೆಜಿಎಫ್ 2 ಸಿನಿಮಾ ಈಗಾಗಲೇ ಬಾಕ್ಸ್ ಆಫೀಸಿನಲ್ಲಿ ಗೆದ್ದಿದೆ. ಕೇವಲ ಥಿಯೇಟರ್ ನಲ್ಲಿ ಮಾತ್ರವಲ್ಲ, ಓಟಿಟಿಯಲ್ಲೂ ಅದು ಅಪಾರ ಸಂಖ್ಯೆಯಲ್ಲಿ ನೋಡುಗರ ಗಮನ ಸೆಳೆದಿದೆ. ಥಿಯೇಟರ್ ಮತ್ತು ಓಟಿಟಿಯಲ್ಲಿ ಭಾರೀ ಗೆಲುವು ಕಂಡಿರುವ ಕೆಜಿಎಫ್ 2 ಇದೀಗ ಟಿವಿಯಲ್ಲೂ ಪ್ರಸಾರವಾಗಲು ಸಿದ್ಧವಾಗಿದೆ.

ಜೀ ಕನ್ನಡ ವಾಹಿನಿಯು ಕೆಜಿಎಫ್ 2 ಸಿನಿಮಾದ ಹಕ್ಕುಗಳನ್ನು ಪಡೆದಿದ್ದು, ಅತೀ ಶೀಘ್ರದಲ್ಲೇ ವಾಹಿನಿಯಲ್ಲಿ ಸಿನಿಮಾ ಪ್ರಸಾರವಾಗಲಿದೆ. ಹಾಗಂತ ವಾಹಿನಿಯು ಇನ್ನೂ ದಿನಾಂಕವನ್ನು ನಿಗಧಿ ಮಾಡಿಲ್ಲ. ಆದರೆ, ‘ಅವನು ಬರ್ತಿದ್ದಾನೆ, ಅದೂ ಒನ್ ವೇ ನಲ್ಲಿಎಂದು ಕ್ಯಾಪ್ಸನ್ ಕೊಡುವ ಮೂಲಕ ಟ್ರೈಲರ್ ಅನ್ನು ರಿಲೀಸ್ ಮಾಡಿದ್ದಾರೆ. ವಾಹಿನಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಟ್ರೈಲರ್ ಕೂಡ ಸಖತ್ತಾಗಿ ರಂಜಿಸುತ್ತಿದೆ.

ಕೆಜಿಎಫ್ 2 ಸಿನಿಮಾವನ್ನು ಈಗಾಗಲೇ ಬಹುತೇಕ ಸಿನಿ ಪ್ರೇಕ್ಷಕರು ನೋಡಿದ್ದರೂ, ಟಿವಿಯಲ್ಲೂ ಕೂಡ ಅತ್ಯಧಿಕ ನಂಬರ್ ಬರುತ್ತದೆ ಎಂದು ಹೇಳಲಾಗುತ್ತಿದೆ. ಅನೇಕರು ಮರುವೀಕ್ಷಣೆ ಮಾಡುವುದರಿಂದ ಸಹಜವಾಗಿಯೇ  ನೋಡುಗರ ಸಂಖ್ಯೆಯೂ ಹಿಗ್ಗಲಿದೆ ಎನ್ನುವುದು ಲೆಕ್ಕಾಚಾರ. ಸದ್ಯ ಟ್ರೈಲರ್ ಮಾತ್ರ ಬಿಟ್ಟಿದ್ದು, ಪ್ರಸಾರದ ದಿನಾಂಕವನ್ನು ಅತೀ ಶೀಘ್ರದಲ್ಲೇ ವಾಹಿನಿ ಘೋಷಣೆ ಮಾಡಲಿದೆ.(ಎಸ್.ಎಂ)

Leave a Reply

comments

Related Articles

error: