ಮೈಸೂರುಸುದ್ದಿ ಸಂಕ್ಷಿಪ್ತ

ವಿಜಯ ವಿಠಲ ಕಾಲೇಜಿನಲ್ಲಿ ಅಂತರಕಾಲೇಜು ಸ್ಪರ್ಧೆಗಳು

ಮೈಸೂರು,ಆ.13:- ವಿಜಯ ವಿಠ್ಠಲ ಸಂಯುಕ್ತ ಪದವಿಪೂರ್ವ ಕಾಲೇಜು ಮೈಸೂರು ವತಿಯಿಂದ ನಗರ ಮಟ್ಟದ ಅಂತರ ಪದವಿಪೂರ್ವ ಕಾಲೇಜು ಭಾವಗೀತೆ ಮತ್ತು ಸಾಮಾನ್ಯಜ್ಞಾನ ರಸಪ್ರಶ್ನೆ ಸ್ಪರ್ಧೆಯನ್ನು ಕಾಲೇಜಿನ ಸಭಾಂಗಣದಲ್ಲಿ ಆ.27ರಂದು ಬೆಳಿಗ್ಗೆ 9.30 ಕ್ಕೆ ಆಯೋಜಿಸಲಾಗಿದೆ.

ಭಾವಗೀತೆ ಸ್ಪರ್ಧೆಗೆ ಇಬ್ಬರು ವಿದ್ಯಾರ್ಥಿಗಳು ಮತ್ತು ಸಾಮಾನ್ಯಜ್ಞಾನ ರಸಪ್ರಶ್ನೆಗೆ ಇಬ್ಬರು ವಿದ್ಯಾರ್ಥಿಗಳ ಒಂದು ತಂಡ ಭಾಗವಹಿಸಬಹುದಾಗಿದೆ. ಆಸಕ್ತ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ವತಿಯಿಂದ ಈ ಎರಡೂ ಸ್ಪರ್ಧೆಗಳಲ್ಲಿ ಭಾಗವಹಿಸಲಿಕ್ಕಾಗಿ ತಮ್ಮ ಹೆಸರನ್ನು ಕಾಲೇಜಿನ ಕಛೇರಿಯಲ್ಲಿ (ದೂರವಾಣಿ ಸಂಖ್ಯೆ – 0821 – 4243700) ನೊಂದಾಯಿಸಿ ಕೊಳ್ಳಲು ಕೊನೆಯ 24-08-2022 ಎಂದು ಕಾಲೇಜಿನ ಪ್ರಾಂಶುಪಾಲರಾದ ಹೆಚ್. ಸತ್ಯಪ್ರಸಾದ್ ತಿಳಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: