ಮೈಸೂರು

19 ಕೆರೆಗಳಲ್ಲಿ ಅಮೃತ ಮಹೋತ್ಸವ ಆಚರಣೆ

ಮೈಸೂರು,ಆ. 14:- ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ
ಯಲ್ಲಿ ಮೈಸೂರಿನ 19 ಕೆರೆಗಳಲ್ಲಿ ಅಮೃತ ಮಹೋತ್ಸವ ಆಚರಣೆ
ಮಾಡಲಾಗುತ್ತಿದೆ.
ಜಿಲ್ಲಾ ಪಂಚಾಯತಿ ವತಿಯಿಂದ ಮಹತ್ವದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೆಚ್. ಡಿ. ಕೋಟೆ, ಹುಣಸೂರು, ಮೈಸೂರು,ನಂಜನಗೂಡು ಸೇರಿದಂತೆ 19 ಕೆರೆಗಳಲ್ಲಿ ರಾಷ್ಟ್ರ ಧ್ವಜ ಹಾರಿಸಿ ಅರ್ಥ ಪೂರ್ಣ ಅಮೃತ ಮಹೋತ್ಸವ ಆಚರಣೆಗೆ ಜಿ.ಪಂ.
ಮುಂದಾಗಿದೆ. ದೇಶಾದ್ಯಂತ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಅಂಗವಾಗಿ ಜಲಮೂಲಗಳ ಪುನಶ್ಚೇತನಕ್ಕಾಗಿ ಸಂಕಲ್ಪ ಕೈಗೊಳ್ಳಲಾಗುತ್ತಿದೆ.
ಕೇಂದ್ರ ಸರ್ಕಾರದದ ಅಮೃತ ಸರೋವರ ಕಾರ್ಯಕ್ರಮದಡಿ ಕೆರೆಗಳ ಸಂರಕ್ಷಣೆ ಮಾಡಲು ಜಿಲ್ಲಾ ಪಂಚಾಯತಿ ಮುಂದಾಗಿದೆ. ವಾರ್ಷಿಕ 75 ಕೆರೆಗಳ ಸಂರಕ್ಷಣೆ ಗೆ ಕೇಂದ್ರ ಸರ್ಕಾರ ಗುರಿ ನೀಡಿದೆ. ಮೈಸೂರು ಜಿಲ್ಲೆಯ 79 ಕೆರೆಗಳನ್ನು ಅಭಿವೃದ್ಧಿಗೊಳಿಸುವ ಗುರಿ ಯನ್ನು ಜಿ. ಪಂ ಹೊಂದಿದೆ. (ಕೆ. ಎಸ್, ಎಸ್. ಎಚ್)

Leave a Reply

comments

Related Articles

error: