ಕರ್ನಾಟಕಪ್ರಮುಖ ಸುದ್ದಿ

ಇಲ್ಲಿ ಡ್ರಾಮ ಮಾಡಲು ಬರಬೇಡಿ : ಬಿಜೆಪಿ ನಗರಸಭಾ ಸದಸ್ಯರ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಗರಂ

ರಾಜ್ಯ(ರಾಮನಗರ),ಆ.16 : ಬಿಜೆಪಿಯ ನಗರಸಭಾ ಸದಸ್ಯರ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಗರಂ ಆಗಿದ್ದು, ನಗರಸಭಾ ಸದಸ್ಯರು ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ರಾಮನಗರದಲ್ಲಿ ನಡೆದಿದೆ.

ಚನ್ನಪಟ್ಟಣ ನಗರಸಭೆ ಆವರಣದಲ್ಲಿ ಇಂದು ಸ್ವಚ್ಛತಾ ವಾಹನಗಳ ಲೋಕಾರ್ಪಣೆ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಕಾರ್ಯಕ್ರಮದಲ್ಲಿ ನಮ್ಮನ್ನು ಕಡೆಗಣಿಸಲಾಗಿದೆ ಎಂದು ಬಿಜೆಪಿ ಸದಸ್ಯರು ಕಪ್ಪುಪಟ್ಟಿ ತೋರಿಸಿ ಆಕ್ರೋಶ ವ್ಯಕ್ತಪಡಿಸಿ. ನಗರ ಪಾಲಿಕೆ ಅಧ್ಯಕ್ಷರು ಹಾಗೂ ಹೆಚ್ಡಿಕೆ ವಿರುದ್ಧ ಬಿಜೆಪಿ ಸದಸ್ಯರು ಧಿಕ್ಕಾರ ಕೂಗಿದ್ದಾರೆ. ವೇಳೆ ಬಿಜೆಪಿ ಸದಸ್ಯರ ವಿರುದ್ಧ ಸಿಟ್ಟಾದ ಎಚ್ಡಿಕೆ ಇಲ್ಲಿ ಡ್ರಾಮ ಮಾಡಲು ಬರಬೇಡಿ ಎಂದು ಸಿಟ್ಟು ಹೊರಹಾಕಿದ್ದಾರೆ.

ಎಚ್ಡಿಕೆ ಹೇಳಿಕೆ ಬೆನ್ನಲ್ಲೇ ಜೆಡಿಎಸ್ ಸದಸ್ಯರು ಹಾಗೂ ಬಿಜೆಪಿ ಸದಸ್ಯರ ನಡುವೆ ವಾಗ್ವಾದ ಜೋರಾಗಿದೆ. ಕೊನೆಗೆ ಎರಡು ಕಡೆಯ ನಗರಸಭಾ ಸದಸ್ಯರನ್ನು ಪೊಲೀಸರು ಸಮಾಧಾನ ಪಡಿಸಿದ್ದಾರೆ.(ಎಸ್.ಎಂ)

Leave a Reply

comments

Related Articles

error: