ದೇಶಪ್ರಮುಖ ಸುದ್ದಿ

ನದಿ ಕಣಿವೆಗೆ ಉರುಳಿದ ಬಸ್ : 6 ಮಂದಿ ಯೋಧರು ಹುತಾತ್ಮ

ದೇಶ(ಶ್ರೀನಗರ),ಆ.16 : ಐಟಿಬಿಪಿ ಮತ್ತು ಜಮ್ಮು ಕಾಶ್ಮೀರ ಪೊಲೀಸರನ್ನು ಹೊತ್ತೊಯ್ಯುತ್ತಿದ್ದ ಬಸ್ ಬ್ರೇಕ್ ಫೇಲ್ ಆಗಿ ನದಿ ಕಣಿವೆಗೆ ಉರುಳಿ ಬಿದ್ದ ಪರಿಣಾಮ ಸ್ಥಳದಲ್ಲೇ ಆರು ಮಂದಿ ಐಟಿಬಿಪಿ ಸಿಬ್ಬಂದಿ ಹುತಾತ್ಮರಾಗಿದ್ದು, ಕಾಶ್ಮೀರದ ಪಹಲ್ಗಾಮ್ ಫ್ರಿಸ್ಲಾನ್ನಲ್ಲಿ ದುರ್ಘಟನೆ ನಡೆದಿದೆ.

ಅಮರನಾಥ ಯಾತ್ರೆ ಪ್ರದೇಶದಲ್ಲಿ ಭದ್ರತೆಗಾಗಿ ನಿಯೋಜಿಸಿದ್ದ 37 ಐಟಿಬಿಪಿ, ಇಬ್ಬರು ಜಮ್ಮುಕಾಶ್ಮೀರ ಪೊಲೀಸರನ್ನು ಚಂದನ್ವಾರಿಯಿಂದ ಪಹಲ್ಗಾಮ್ ಕಡೆಗೆ ಕರೆದೊಯ್ಯುಲಾಗುತ್ತಿತ್ತು. ಸಂದರ್ಭದಲ್ಲಿ ಘಟನೆ ನಡೆದಿದ್ದು, ಇನ್ನು ಹಲವು ಸಿಬ್ಬಂದಿಗಳು ಗಾಯಗಳಾಗಿರುವ ಮಾಹಿತಿ ಸಿಕ್ಕಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಚರಣೆ ನಡೆಸಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಹಳ ಎತ್ತರದ ಪ್ರದೇಶದಿಂದ ನದಿ ಕಣಿವೆಗೆ ಬಸ್ ಬಿದ್ದಿರುವ ಹಿನ್ನೆಲೆ ಸಾವುನೋವುಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಬಸ್ ಅವಘಡಕ್ಕೆ ಮೇಲ್ನೋಟಕ್ಕೆ ಬ್ರೇಕ್ ಫೇಲ್ ಎಂದು ಗೊತ್ತಾಗಿದ್ದು, ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.(ಎಸ್.ಎಂ)

Leave a Reply

comments

Related Articles

error: