ದೇಶಪ್ರಮುಖ ಸುದ್ದಿಮನರಂಜನೆ

ಬಾಲಿವುಡ್ ಖ್ಯಾತ ಗಾಯಕನ ಮೇಲೆ ಮತ್ತೆ ರೇಪ್ ಆರೋಪ : ಎಫ್.ಐ.ಆರ್ ದಾಖಲು

ದೇಶ(ಮುಂಬೈ),ಆ.16 : ರಿಯಾಲಿಟಿ ಶೋ ಮೂಲಕ ಗಾಯನ ಪ್ರಪಂಚಕ್ಕೆ ಪರಿಚಯವಾದ, ಇದೀಗ ಬಾಲಿವುಡ್ ನಲ್ಲಿ ಸಖತ್ ಫೇಮಸ್ಸೂ ಆಗಿರುವ ಸಿಂಗರ್ ರಾಹುಲ್ ಜೈನ್ ಮೇಲೆ ಎಫ್..ಆರ್ ದಾಖಲಾಗಿದೆ.

ಕೆಲಸದ ನೆಪದಲ್ಲಿ ರಾಹುಲ್ ಜೈನ್, ಮಹಿಳೆಯೊಬ್ಬರನ್ನು ತಮ್ಮ ಮನೆಗೆ ಕರೆಯಿಸಿಕೊಂಡು ಅತ್ಯಾಚಾರ ಎಸೆಗಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ. ರಾಹುಲ್ ಮೇಲೆ ಅವರು ದೂರನ್ನೂ ದಾಖಲಿಸಿದ್ದಾರೆ.

ನಾನು ಅನೇಕ ಸೆಲೆಬ್ರಿಟಿಗಳಿಗೆ ಕಾಸ್ಟ್ಯೂಮ್ ಸ್ಟೈಲಿಸ್ಟ್ ಆಗಿ ಕೆಲಸ ಮಾಡುತ್ತೇನೆ. ಇದೇ ಆಗಸ್ಟ್ 11 ರಂದು ರಾಹುಲ್ ಜೈನ್, ತಮಗೂ ಪರ್ಸನಲ್ ಆಗಿ ಕಾಸ್ಟ್ಯೂಮ್ ಡಿಸೈನ್ ಮಾಡಬೇಕು ಎಂದು ಕೆಲಸದ ನೆಪದಲ್ಲಿ ನನ್ನನ್ನು ತಮ್ಮ ಫ್ಲ್ಯಾಟ್ ಗೆ ಕರೆದರು. ಅವರ ಮಾತನ್ನು ನಿಜವೆಂದು ನಂಬಿಕೊಂಡು ನಾನೂ ಹೋದೆ. ಅವರು ನನ್ನನ್ನು ತಮ್ಮ ಬೆಡ್ ರೂಮ್ ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸೆಗಿದ್ದಾರೆ ಎಂದು ಮುಂಬೈನಲ್ಲಿ ಮಹಿಳೆ ದೂರು ನೀಡಿದ್ದಾರೆ. ಕುರಿತಂತೆ ಈಗಾಗಲೇ ಮುಂಬೈ ಪೊಲೀಸ್ ತನಿಖೆಗೆ ಇಳಿದಿದ್ದಾರೆ.

ಕುರಿತು ರಾಹುಲ್ ಜೈನ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಹೀಗೆ ಮಹಿಳೆಯರು ನನ್ನ ಮೇಲೆ ರೀತಿಯ ದೂರು ನೀಡುವುದು ಹೊಸದಲ್ಲ. ಹಿಂದೆಯೂ ಒಬ್ಬರು ದೂರು ಕೊಟ್ಟಿದ್ದರು. ಆದರೆ, ನಾನು ಅದರಲ್ಲಿ ಗೆದ್ದೆ. ನನ್ನಿಂದ ತಪ್ಪಾಗಿಲ್ಲ ಅಂತ ನನಗೆ ನ್ಯಾಯ ಸಿಕ್ಕಿತು. ಈಗ ಆರೋಪ ಮಾಡಿರುವ ಹುಡುಗಿ ಯಾರೆಂದು ನನಗೆ ಗೊತ್ತಿಲ್ಲ. ಹಿಂದೆ ದೂರು ಕೊಟ್ಟಿರುವ ಹುಡುಗಿಗೂ ಈಕೆಗೂ ಏನಾದರೂ ಸಂಬಂಧ ಇದೆಯಾ ತನಿಖೆ ಮಾಡಬೇಕು ಎಂದಿದ್ದಾರೆ.(ಎಸ್.ಎಂ)

Leave a Reply

comments

Related Articles

error: