ಮೈಸೂರು

ಶ್ರೀ ನಟರಾಜ ಕಾಲೇಜಿನಲ್ಲಿ ಉದ್ಯಮಶೀಲತೆಯ ಜಾಗೃತಿ ಕಾರ್ಯಕ್ರಮ ಸಮಾರೋಪ

ಮೈಸೂರು, ಆ. 16:- ಕೌಶಲ್ಯ ಕರ್ನಾಟಕ ಮತ್ತು ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಕೌಶಲ್ಯ ಅಭಿವೃದ್ಧಿ ಮತ್ತು ಜೀವನೋಪಾಯ ವಿಭಾಗ ಬೆಂಗಳೂರು. ಇವರ ಆಶ್ರಯದಲ್ಲಿ ಇತ್ತೀಚೆಗೆ
ಮೂರು ದಿನಗಳ ಉದ್ಯಮಶೀಲತೆಯ ಜಾಗೃತಿ ಕಾರ್ಯಕ್ರಮದ ಸಮರೋಪ ಸಮಾರಂಭವನ್ನು ಶ್ರೀ ನಟರಾಜ ಕಾಲೇಜಿನಲ್ಲಿ
ಆಯೋಜಿಸಲಾಗಿತ್ತು.

ಮಂಜುನಾಥ್ ಸ್ವಾಮಿ (ಜಂಟಿ ನಿರ್ದೇಶಕರು) ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್) ಇವರು ಮಾತಾನಾಡುತ್ತಾ ಸರ್ಕಾರದ ಎಲ್ಲಾ ಉದ್ಯಮಗಳನ್ನು ನಡೆಸಲು ಆರ್ಥಿಕ ನೆರವನ್ನು ನೀಡುತ್ತದೆ. ಪ್ರತಿಯೊಬ್ಬ ವಿದ್ಯಾರ್ಹತೆ ಹೊಂದಿದವರಿಗೆಲ್ಲರಿಗೂ ಪ್ರಸ್ತುತ ದಿನಮಾನದಲ್ಲಿ ಸರ್ಕಾರಿ ಉದ್ಯೋಗ ದೊರೆಯುವುದು ಕಷ್ಟ. ಸ್ವಯಂ ಉದ್ಯೋಗದಿಂದ ಆರ್ಥಿಕ ಸ್ಥಿರತೆ ಹೊಂದಲು ಸಾಧ್ಯ ಮತ್ತು ಸ್ವಾವಲಂಬಿಗಳಾಗಿ ಜೀವನ ನಿರ್ವಹಣೆ ಮಾಡಲು ಸಹಕಾರಿಯಾಗುತ್ತದೆ. ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ನಮ್ಮ ಕೇಂದ್ರವು ಮೊದಲ ಆದ್ಯತೆಯನ್ನು ನೀಡುತ್ತದೆ. ಯಾವುದೇ ಒಂದು ಸಣ್ಣ, ಅತಿ ಸಣ್ಣ ಕೈಗಾರಿಕೆಯನ್ನು ಪ್ರಾರಂಭ ಮಾಡುವಾಗ ಮಾರ್ಗದರ್ಶನ ಮತ್ತು ತರಬೇತಿ ಅತ್ಯವಶ್ಯಕ. ಹಾಗಾಗಿ ತಾವೆಲ್ಲರೂ ಈ ಮೂರು ದಿನಗಳ ಉದ್ಯಮಶೀಲತಾ ಜಾಗೃತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಒಂದು ಉದ್ಯಮ ಪ್ರಾರಂಭಿಸಲು ಏನೆಲ್ಲಾ ಅಗತ್ಯ ಸೌಲಭ್ಯಗಳು ಬೇಕಾಗುತ್ತದೆ ಎಂಬುದನ್ನು ಪ್ರಯೋಗಿಕವಾಗಿ ಕೈಗಾರಿಕೆಗಳಿಗೆ ನೇರ ಭೇಟಿ ನೀಡಿ ಮಾಹಿತಿಗಳನ್ನು ಸಂಗ್ರಹಿಸಿದ್ದೀರಿ, ತಮ್ಮ ಉನ್ನತ ವ್ಯಾಸಂಗವನ್ನು ಪಡೆಯುವುದರೊಂದಿಗೆ ಸ್ವ ಉದ್ಯಮಗಳನ್ನು ಪ್ರಾರಂಭಿಸಿ ಜೀವನವನ್ನು ಉನ್ನತೀಕರಿಸಿಕೊಳ್ಳಲು ಸಲಹೆ ನೀಡಿದ್ದರು ಎಂದು ವಿದ್ಯಾರ್ಥಿನಿಯರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ನಾವು ಯುವ ಉದ್ಯೋಮಿಯಾಗುವುದಾಗಿ ಭರವಸೆ ನೀಡಿದರು.
ಶಿಬಿರದಲ್ಲಿ ಭಾಗವಹಿಸಿದ್ದ 80 ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಶ್ರೀ ನಟರಾಜ ಕೌಶಲ್ಯಾಭಿವೃದ್ಧಿ ಕೇಂದ್ರದ ನಿರ್ದೇಶಕರಾದ ಆನಂದ ಆರ್ಮಗಂ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಎನ್.ಜಿ. ಲೋಕೇಶ್, ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ಜಿ. ಪ್ರಸಾದಮೂರ್ತಿ ಶಿಬಿರದ ಸಂಪನ್ಮೂಲ ವ್ಯಕ್ತಿಯಾದ ಕಿಶೋರ್, ಜ್ಯೋತಿ., ಅಧ್ಯಾಪಕರು ಹಾಗೂ ವಿದ್ಯಾರ್ಥಿನಿಯರು ಹಾಜರಿದ್ದರು. (ಜಿ ಕೆ, ಎಸ್. ಎಚ್)

Leave a Reply

comments

Related Articles

error: