ಮೈಸೂರು

ಸೈಬರ್ ಕ್ರೈಂ ಪ್ರಕರಣ : ಓರ್ವನ ಬಂಧನ

ಮೈಸೂರು,ಆ. 16:-ಸೈಬರ್ ಕ್ರೈಂ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 15,05,0.00 ರೂ ನಗದು ಹಣ, 2,16,000ಮೌಲ್ಯದ ಬೆಲೆ ಬಾಳುವ ವಸ್ತುಗಳು ಮತ್ತು
4 ಗ್ರಾಂ ಚಿನ್ನದ ಸರ ವಶ ಪಡಿಸಿಕೊಂಡಿದ್ದಾರೆ

ಹೆಚ್.ಡಿ.ಎಫ್.ಸಿ ಬ್ಯಾಂಕ್ ಖಾತೆಯ ಡೆಬಿಟ್ ಕಾರ್ಡ್ ನಂಬರ್‍ನಲ್ಲಿ 01.11.2020 ರಿಂದ 24.12.2020 ರವರೆಗೆ ಒಟ್ಟು 21,02,041ರೂ. ಹಣವನ್ನು ಖಾತೆದಾರರ ಗಮನಕ್ಕೆ ಬಾರದೆ ವರ್ಗಾವಣೆ ಆಗಿರುವ ಬಗ್ಗೆ 08/01/2021 ರಂದು ಮೈಸೂರು ನಗರ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡ ಸೈಬರ್ ಪೊಲೀಸರು ತಂತ್ರಜ್ಞಾನದ ಸಹಕಾರದಿಂದ ಆರೋಪಿಯು ವಸ್ತುಗಳನ್ನು ಖರೀದಿಸಿದ್ದ ಕಂಪನಿಯಿಂದ ಮಾಹಿತಿ ಪಡೆದುಕೊಂಡು, 14/08/2022 ರಂದು ಒಬ್ಬ ಆರೋಪಿಯನ್ನು ದಸ್ತಗಿರಿ ಮಾಡಿ ವಿಚಾರಣೆ ಮಾಡಲಾಗಿ, ಆರೋಪಿಗೆ ಪಿರ್ಯಾದಿಯು
ಪರಿಚಯಸ್ಥನಾಗಿದ್ದು, ಪಿರ್ಯಾದಿಯವರ ಡೆಬಿಟ್ ಕಾರ್ಡ್ ಮತ್ತು ಸಿವಿವಿ ನಂಬರನ್ನು ತಿಳಿದುಕೊಂಡ ಆರೋಪಿಯು ಅಮೆಜಾನ್‍ ನಲ್ಲಿ ಸುಮಾರು 20,00,000ರೂ ಬೆಲೆಬಾಳುವ ಚಿನ್ನದ ಕಾಯಿನ್‍ ಗಳು ಮತ್ತು
ಇತರೆ ವಸ್ತುಗಳನ್ನು ಖರೀದಿಸಿದ್ದು, ಇವುಗಳಲ್ಲಿ ಚಿನ್ನವನ್ನು ಮಾರಾಟ ಮಾಡಿ ರೂ. 15,05,000 ನಗದು ಹಣ ಇಟ್ಟಿರುವುದಾಗಿ ತಿಳಿಸಿದ್ದರ ಮೇರೆಗೆ ಆರೋಪಿತನಿಂದ ನಗದು ಹಣ 15,05,000 ರೂ ಹಾಗೂ
ಅಂದಾಜು 2,16,000 ರೂ ಬೆಲೆಬಾಳುವ ಎರಡು ಕ್ಯಾಮೆರಾ, ಟಿವಿ, ಕ್ಯಾಮೆರಾ ಲೆನ್ಸ್, ಥ್ರೆಡ್‍ಮಿಲ್, ಸ್ಪೀಕರ್, ಯುಪಿಎಸ್‍ಗಳು ಹಾಗೂ 04 ಗ್ರಾಂ ಚಿನ್ನದ ಸರವನ್ನು ಅಮಾನತ್ತುಪಡಿಸಿಕೊಳ್ಳಲಾಗಿದೆ.
ಅಮಾನತ್ತುಪಡಿಸಿಕೊಂಡಿರುವ ನಗದು ಮತ್ತು ಇತರೇ ವಸ್ತುಗಳ ಒಟ್ಟು ಮೌಲ್ಯ ಅಂದಾಜು 17,41,000ರೂ ಆಗಿರುತ್ತದೆ. ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಡಿ.ಸಿ.ಪಿ. ಕಾನೂನು ಮತ್ತು ಸುವ್ಯವಸ್ಥೆ ಪ್ರದೀಪ್ ಗುಂಟಿರವರ ನಿರ್ದೇಶನದಂತೆ ದೇವರಾಜ ವಿಭಾಗದ ಎ.ಸಿ.ಪಿ ಶಶಿಧರ್.ಎಂ.ಎನ್ ರವರ ಮಾರ್ಗದರ್ಶನದಂತೆ, ಮೈಸೂರು ನಗರ ಸೆನ್ ಕ್ರೈಂ ಪೊಲೀಸ್ ಠಾಣೆಯ ಪಿ.ಐ. ಎನ್. ಜಯಕುಮಾರ್, ಆನಿಲ್ ಕುಮಾರ್ ಎನ್, ಸಿದ್ದೇಶ್ ಎಂ.ಎಲ್. ಮತ್ತು ಎ.ಎಸ್.ಐ. ಸುಭಾಷ್‍ಚಂದ್ರ, ನಾಗೇಂದ್ರ ಮತ್ತು. ಭಾಷಾ ಮತ್ತು ಇತರೆ ಸಿಬ್ಬಂದಿಗಳು ಮಾಡಿರುತ್ತಾರೆ. (ಕೆ ಎಸ್, ಎಸ್. ಎಚ್)

Leave a Reply

comments

Related Articles

error: