ದೇಶಪ್ರಮುಖ ಸುದ್ದಿ

ಡಿ.ಕೆ.ಶಿವಕುಮಾರ್ ಇಡಿ ಪ್ರಕರಣ : ಸೆ.27ಕ್ಕೆ ವಿಚಾರಣೆ ಮುಂದೂಡಿಕೆ

ದೇಶ(ನವದೆಹಲಿ),ಆ.17 : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣ ಸೆಪ್ಟೆಂಬರ್ 27ಕ್ಕೆ ಮುಂದೂಡಿಕೆಯಾಗಿದ್ದು, ಪ್ರಕರಣ ಮೂವರು ಆರೋಪಿಗಳು ಜಾರ್ಜ್ಶೀಟ್ ಜೊತೆಗೆ ಇಡಿ ನ್ಯಾಯಾಲಯಕ್ಕೆ ಸಲ್ಲಿಸಿದ ದಾಖಲೆಗಳನ್ನು ಒದಗಿಸುವಂತೆ ಕೇಳಿದ ಹಿನ್ನೆಲೆ ವಿಚಾರಣೆ ಮುಂದೂಡಲಾಗಿದೆ.

ಇಂದು ವಿಚಾರಣೆ ವೇಳೆ ಪ್ರಕರಣ ಇತರೆ ಆರೋಪಿಗಳಾದ ಸಚಿನ್ ನಾರಾಯಣ್, ಸುನೀಲ್ ಶರ್ಮಾ, ರಾಜೇಂದ್ರ. ಎನ್, ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿ ನೀಡಬೇಕು ಎಂದು ಮನವಿ ಮಾಡಿದ್ದರು, ಇದಕ್ಕೆ ಒಪ್ಪಿದ ಇಡಿ ಪರ ವಕೀಲರು, ತರ್ಜುಮೆ ಮಾಡಿ ದಾಖಲೆಗಳನ್ನು ನೀಡಲು ನಾಲ್ಕೈದು ವಾರಗಳ ಸಮಯಬೇಕು ಎಂದು ಕೋರ್ಟ್ಗೆ ಹೇಳಿದರು. ವಾದ ಪ್ರತಿ ವಾದ ಆಲಿಸಿದ ಬಳಿಕ ಕೋರ್ಟ್ ವಿಚಾರಣೆ ಮುಂದೂಡಿದೆ.

ವಿಚಾರಣೆ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ, ಈಗಾಗಲೇ ಜಾಮೀನು ಸಿಕ್ಕಿದೆ. ಅದಾಗ್ಯೂ ನ್ಯಾಯಾಲಯಕ್ಕೆ ಗೌರವ ಕೊಟ್ಟು ಕೋರ್ಟ್ಗೆ ಹಾಜರಾಗಿದ್ದೆ. ಇತರೆ ಆರೋಪಿಗಳು ದಾಖಲೆಗಳನ್ನು ಕೇಳಿದ್ದಾರೆ. ಅವುಗಳನ್ನು ಕೊಟ್ಟ ಬಳಿಕ ಮುಂದೆ ನೋಡಿಕೊಂಡು ಮಾತನಾಡುತ್ತೇನೆ ಎಂದಿದ್ದಾರೆ.

ನಂತರ ಸಚಿವ ಶ್ರೀರಾಮುಲು ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ನನಗೆ ಈ ಒಳ ಒಪ್ಪಂದಗಳ ಅನುಭವ ಇಲ್ಲ ಎಂದರು. ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಶ್ರೀರಾಮುಲು ಹೇಳಿದ್ದಾರೆ ಸಂತೋಷ. ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತೆ ಅಂತಾ ಆಯ್ತಲ್ಲ, ಇದು ಸಂತೋಷ ಅಲ್ವ?, ಬೇರೆ ಪಕ್ಷದ ನಾಯಕರು ನಮ್ಮ ಪಕ್ಷದ ಅಧಿಕಾರಕ್ಕೆ ಬರುವ ಬಗ್ಗೆ ಮಾತನಾಡುತ್ತಿರುವುದು ಖುಷಿ ವಿಚಾರವಾಗಿದ್ದು, ಶ್ರೀರಾಮುಲು ಮತ್ತು ಮಾಧುಸ್ವಾಮಿಗೆ ನಾನು ಅಭಿನಂದಿಸುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.(ಎಸ್.ಎಂ)

Leave a Reply

comments

Related Articles

error: