ಮೈಸೂರು

ದೇಶಭಕ್ತಿ ಗಾಯನ ಸ್ಪರ್ಧೆ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ

ಮೈಸೂರು, ಆ. 17:- ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಅಗ್ರಹಾರದ ಶಂಕರಮಠದಲ್ಲಿ ವಿಪ್ರ ಮಹಿಳಾ ಸಂಗಮ ವತಿಯಿಂದ ದೇಶಭಕ್ತಿ ಗಾಯನ ಸ್ಪರ್ಧೆ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಲಾಯಿತು.

ದೇಶಭಕ್ತಿ ಗಾಯನ ಸ್ಪರ್ಧೆಯಲ್ಲಿ 40ಕ್ಕೂ ಹೆಚ್ಚು ಮಹಿಳೆಯರು ಸ್ಪರ್ಧಿಸಿದ್ದು ವಿವಿಧ ದೇಶಭಕ್ತಿ ಗೀತೆಗಳನ್ನು ಹಾಡುವ ಮೂಲಕ
ದೇಶಪ್ರೇಮ ಮೆರೆದಿದ್ದಾರೆ. ಸಾಮೂಹಿಕ ವಿಭಾಗ
ಸಾಮೂಹಿಕ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಮೊದಲನೆ ವಿಜೇತರಾದ
ಅರುಂಧತಿ ತಂಡ ,ದ್ವಿತೀಯ ಬಹುಮಾನ ಪದ್ಮಿನಿ ವಲ್ಲಭ ತಂಡ ,ತೃತೀಯ ಬಹುಮಾನ ಅನ್ನಪೂರ್ಣ ತಂಡಕ್ಕೆ ಬಹುಮಾನ ಪ್ರದಾನ ಮಾಡಲಾಯಿತು.

ಪ್ರತ್ಯೇಕ ವಿಭಾಗ ದೇಶಭಕ್ತಿ ಗೀತೆ ಸ್ಪರ್ಧೆ ಯಲ್ಲಿ
ಮೊದಲನೇ ಬಹುಮಾನ ಹೇಮಲತಾ ಕುಮಾರಸ್ವಾಮಿ ,ಎರಡನೇ ಬಹುಮಾನ ಪ್ರಭಾ ಬಿ ಎಸ್ ,ಮೂರನೇ ಬಹುಮಾನ ಸುಜಾತಾ ಕೆ ,ನಾಲ್ಕನೇ ಬಹುಮಾನ ವನಮಾಲಾ ಅವರಿಗೆ ನೀಡಲಾಯಿತು.

ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ರಾಜ್ಯ ನಿರ್ದೇಶಕ ಕ್ಯಾಪ್ಟನ್ ಸಿ ವಿ ಗೋಪಿನಾಥ್ ಮಾತನಾಡಿ ನಾವು ದೇಶದ ಬಗ್ಗೆ ಯಾವಾಗಲೂ ನೆನೆಸಿಕೊಳ್ಳಬೇಕು ,ಸುಸಂಸ್ಕೃತ ವ್ಯಕ್ತಿ ಗಳಾಗಿ ಬದುಕಬೇಕು ,ಜನಗಣಮನ ಹೇಳುವಾಗ ಎಲ್ಲರೂ ಎದ್ದು ನಿಂತು ಗೌರವ ಸಲ್ಲಿಸುವ ಮೂಲಕ ಗೌರವಿಸುವುದನ್ನು ಕಲಿತಿದ್ದು ನಮ್ಮ ಪೂರ್ವಿಕರಿಂದ ಅದೇ ನಮ್ಮ ಸಂಸ್ಕಾರ ಮತ್ತು ದೇಶಪ್ರೇಮ ,ನಮ್ಮ ರಾಷ್ಟ್ರವನ್ನು ತಮ್ಮ ಜವಾಬ್ದಾರಿ ಅರಿತು ಜೋಪಾನವಾಗಿ ಕಾಪಾಡಿಕೊಳ್ಳಬೇಕು ಎಂದು ಹೇಳಿದರು

ರಾಷ್ಟ್ರಪತಿ ವಿಜೇತರು ಹಾಗೂ ಸುಧರ್ಮ ಪತ್ರಿಕೆಯ ಮುಖ್ಯಸ್ಥರಾದ ಜಯಲಕ್ಷ್ಮಿ ಮಾತನಾಡಿ ಹೆಣ್ಣುಮಕ್ಕಳಿಗೆ ಬಿಡುವಿಲ್ಲದ ಸಮಯದಲ್ಲೂ ಉತ್ಸಾಹವಾಗಿ ಇಂತಹ ಕಾರ್ಯಕ್ರಮ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ,ಸುಧರ್ಮಾ ಪತ್ರಿಕೆ ನಡೆದುಬಂದ ಹಾದಿಯನ್ನು ವಿವರಿಸಿದರು. ನಮಗೆ ಸಂಸ್ಕೃತ ಮುಖ್ಯ. ಅದನ್ನು ಉಳಿಸುವುದು ಬೆಳೆಸುವುದು ನಮ್ಮ ನಿಮ್ಮ ಆದ್ಯ ಕರ್ತವ್ಯ ,ಮನೆ ಮನೆಯಲ್ಲೂ ವಿಶ್ವದ ಏಕೈಕ ಸಂಸ್ಕೃತ ಪತ್ರಿಕೆಯನ್ನು ಓದುವಂಥ ಕೆಲಸವಾಗಲಿ ಎಂದು ಮನವಿ ಮಾಡಿದರು,ದೇಶದ ಪ್ರಧಾನಿ ನರೇಂದ್ರ ಮೋದಿಯವರು ಸಂಸ್ಕೃತ ಪತ್ರಿಕೆ ನೆನೆದಿರುವುದು ನಮಗೆ ಹೆಮ್ಮೆಯ ವಿಚಾರ ,ಆದರೆ ಮೈಸೂರಿಗರು ಸಂಸ್ಕೃತವನ್ನು ಎಲ್ಲೋ ಒಂದು ಕಡೆ ನಿರ್ಲಕ್ಷಿಸುತ್ತಿರುವುದು ತುಂಬ ಬೇಸರ ಎಂದು ಹೇಳಿದರು.

ವಿಪ್ರ ಮಹಿಳಾ ಸಂಘದ ಅಧ್ಯಕ್ಷರಾದ ಡಾ.ಕೆ ವಿ ಲಕ್ಷ್ಮಿದೇವಿ ,ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ,ಜಿಎಸ್ ಎಸ್ ಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವನಜಾ ಪಂಡಿತ್ ,ಪದ್ಮಶ್ರೀ ಪ್ರಶಸ್ತಿ ಪುರಸ್ಕ ತರಾದ ಸುಧರ್ಮ ಪತ್ರಿಕೆಯ ಜಯಲಕ್ಷ್ಮಿ ,ಶಂಕರ್ ಮಠದ ಕಾರ್ಯದರ್ಶಿ ಶೇಷಾದ್ರಿ , ಇಳೆಯಾಳ್ವಾರ್ ಸ್ವಾಮೀಜಿ ,ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ರಾಜ ನಿರ್ದೇಶಕರು ಸಿ ವಿ ಗೋಪಿನಾಥ್ ,ನಂ ಶ್ರೀಕಾಂತ್ ಕುಮಾರ್ ,ನಂ ಶ್ರೀಕಾಂತ್ ಕುಮಾರ್ ,ಮಾಜಿ ನಗರ ಪಾಲಿಕೆ ಸದಸ್ಯರಾದ ಸೌಭಾಗ್ಯ ಮೂರ್ತಿ,
ಲತಾ ಮೋಹನ್ ,ಹೇಮಲತಾ ,ವೀಣಾ ಡೋಂಗ್ರೆ, ಸಹನಾ ,ಜಯಶ್ರೀ ಇನ್ನಿತರರು ಹಾಜರಿದ್ದರು. (ಕೆ ಎಸ್, ಎಸ್. ಎಚ್)

Leave a Reply

comments

Related Articles

error: