ಕರ್ನಾಟಕಪ್ರಮುಖ ಸುದ್ದಿಮನರಂಜನೆ

ಶೂಟಿಂಗ್ ವೇಳೆ ಅವಘಡ : ಆಸ್ಪತ್ರೆಗೆ ದಾಖಲಾದ ಬಾಹುಬಲಿಯ ಬಿಜ್ಜಳದೇವ

ರಾಜ್ಯ(ಬೆಂಗಳೂರು),ಆ.18 : ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಹಿರಿಯ ಕಲಾವಿದ ನಾಸರ್ ಕಣ್ಣಿಗೆ ಪೆಟ್ಟು ಮಾಡಿಕೊಂಡು ಆಸ್ಪತ್ರೆ ಸೇರಿದ್ದಾರೆ.

ತೆಲಂಗಾಣ ಪೊಲೀಸ್ ಅಕಾಡಮಿಯಲ್ಲಿ ನಡೆದ ಶೂಟಿಂಗ್ ವೇಳೆ ಮೆಟ್ಟಿಲಿನಿಂದ ಬಿದ್ದ ನಾಸರ್ ಅವರಿಗೆ ಕಣ್ಣಿಗೆ ಬಲವಾದ ಪೆಟ್ಟು ಬಿದ್ದಿದೆ. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೆಟ್ಟು ತೀವ್ರವಾಗಿ ಬಿದ್ದಿದ್ದರಿಂದ ಶಸ್ತ್ರ ಚಿಕಿತ್ಸೆ ಕೂಡ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಶೂಟಿಂಗ್ ವೇಳೆ ಸುಹಾಸಿನಿ ಮಣಿರತ್ನ, ಸಯ್ಯಾಜಿ ಶಿಂಧೆ ಸೇರಿದಂತೆ ಹಲವು ಕಲಾವಿದರು ಭಾಗಿಯಾಗಿದ್ದರು.

ಮೆಟ್ಟಿಲಿನಿಂದ ಇಳಿದು ಬರುವ ದೃಶ್ಯವನ್ನು ನಿರ್ದೇಶಕರು ಸೆರೆ ಹಿಡಿಯುತ್ತಿದ್ದರು ಎನ್ನಲಾಗುತ್ತಿದೆ. ನಾಸರ್ ಸಮಯದಲ್ಲಿ ಆಯಾ ತಪ್ಪಿ ಬಿದ್ದಿದ್ದಾರೆ. ರಭಸವಾಗಿಯೇ ನಾಸರ್ ಬಿದ್ದಿದ್ದರಿಂದ ಏಟಾಗಿದೆ ಎಂದು ಹೇಳಲಾಗುತ್ತಿದೆ.

ನಾಸರ್ ಕನ್ನಡದಲ್ಲೂ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳು, ತೆಲುಗು, ಮಲೆಯಾಳಂ, ಹಿಂದಿ ಹೀಗೆ ಹಲವು ಭಾಷೆಯ ಚಿತ್ರಗಳಲ್ಲೂ ಇವರು ಕಾಣಿಸಿಕೊಂಡಿದ್ದಾರೆ. ಅದರಲ್ಲೂ ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾದ ಬಿಜ್ಜಳದೇವ ಪಾತ್ರದ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಅವರು ಅಭಿಮಾನಿಗಳನ್ನು ಗಳಿಸಿದ್ದರು. ಸದ್ಯ ಆರೋಗ್ಯ ಸ್ಥಿರವಾಗಿದ್ದು, ಅಭಿಮಾನಿಗಳು ಆತಂಕ ಪಡಬೇಕಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.(ಎಸ್.ಎಂ)

Leave a Reply

comments

Related Articles

error: