ಕರ್ನಾಟಕಪ್ರಮುಖ ಸುದ್ದಿ

ನಿಧಿ ಆಸೆ ತೋರಿಸಿ ಐದು ಲಕ್ಷಕ್ಕೆ ಪಂಗನಾಮ ಹಾಕಿದ ಕಳ್ಳ ಸ್ವಾಮಿ

ರಾಜ್ಯ(ಹಾಸನ),ಆ.18 : ನಿಧಿ ಆಸೆ ತೋರಿಸಿ ದಂಪತಿಗೆ ಐದು ಲಕ್ಷ ರೂಪಾಯಿ ಪಂಗನಾಮ ಹಾಕಿ ಕಳ್ಳಸ್ವಾಮೀಜಿ ಎಸ್ಕೇಪ್ ಆಗಿರುವ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಗ್ರಾಮದಲ್ಲಿ ನಡೆದಿದೆ.

ಮಂಜೇಗೌಡಲೀಲಾವತಿ ಹಣ ಕಳೆದುಕೊಂಡ ದಂಪತಿ. ಅರಕಲಗೂಡು ತಾಲೂಕಿನ ದೊಡ್ಡಹಳ್ಳಿ ಗ್ರಾಮದ ಮಂಜೇಗೌಡ (ಕಳ್ಳಸ್ವಾಮೀಜಿ) ನಿಮ್ಮ ಜಮೀನಿನಲ್ಲಿ ನಿಧಿ ಇದ್ದು, ನನ್ನಲ್ಲಿರುವ ದೈವ ಶಕ್ತಿಯಿಂದ ಅದನ್ನು ಹೊರ ತೆಗೆಯುತ್ತೇನೆ ಎಂದು ದಂಪತಿಯನ್ನು ನಂಬಿಸಿದ್ದಾನೆ. ಇದಕ್ಕೂ ಮುನ್ನ ಮಂಜೇಗೌಡರ ಹೊಲದಲ್ಲಿ ಚಿನ್ನ ಲೇಪಿತ ಮೂರು ಕೆಜಿ ಬೆಳ್ಳಿ ವಿಗ್ರಹ ಹೂತಿಟ್ಟಿದ್ದಾನೆ. ನಂತರ ರಾತ್ರಿ ವೇಳೆ ಜಮೀನಿಗೆ ಮಂಜೇಗೌಡಲೀಲಾವತಿ ಕರೆದೊಯ್ದು ಮೊದಲು ಪೂಜೆ ಮಾಡಿ, ಜಮೀನಿನಲ್ಲಿ ಹೂತಿಟ್ಟಿದ್ದ ಚಿನ್ನ ಲೇಪಿತ ವಿಗ್ರಹ ಹೊರತೆಗೆದು ತೊಳೆದು ದಂಪತಿಗೆ ನೀಡಿದ್ದಾನೆ.

ಇಷ್ಟಕ್ಕೆ ಸುಮ್ಮನಾಗದ ಮಂಜೇಗೌಡ ಚಿನ್ನದ ವಿಗ್ರಹಕ್ಕೆ ರಕ್ತ ಅಭಿಷೇಕ ಮಾಡಬೇಕು ಎಂದು ಲೀಲಾವತಿಯ ಬೆರಳನ್ನೇ ಕೊಯ್ದಿದ್ದಾನೆ. ಬೆರಳು ಕೊಯ್ದ ರಭಸಕ್ಕೆ ಮಹಿಳೆ ಕೈ ಬೆರಳಿನ ನರವೇ ಕತ್ತರಿಸಿ ಹೋಗಿದೆ. ಒಂದು ವಾರದ ನಂತರ ಮಂಜೇಗೌಡಲೀಲಾವತಿ ಜ್ಯೂವೆಲರಿ ಶಾಪ್ಗೆ ತೆರಳಿ ವಿಗ್ರಹ ಪರಿಶೀಲಿಸಿದಾಗ ಬೆಳ್ಳಿ ವಿಗ್ರಹ ಎಂಬುದು ಪತ್ತೆಯಾಗಿದೆ. ಇತ್ತ ಕಳ್ಳ ಸ್ವಾಮೀಜಿ ದಂಪತಿಗೆ ವಂಚಿಸಿ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಹಣದ ಸಮೇತ ಎಸ್ಕೇಪ್ ಆಗಿದ್ದಾನೆ. ಇತ್ತ ಗಾಯಗೊಂಡಿದ್ದ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಾಸ್ಸಾಗಿದ್ದಾರೆ. ಅರಕಲಗೂಡು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಇದುವರೆಗೂ ಪೊಲೀಸ್ ಠಾಣೆಗೆ ದೂರು ನೀಡಿಲ್ಲ.(ಎಸ್.ಎಂ)

Leave a Reply

comments

Related Articles

error: