ಕರ್ನಾಟಕಪ್ರಮುಖ ಸುದ್ದಿ

ಮಗನ ತಿಥಿಯ ದಿನವೇ ತಾಯಿ ಸಾವು : ಸುದ್ದಿ ಕೇಳಿ ಮತ್ತಿಬ್ಬರು ಮಕ್ಕಳು ಆಸ್ಪತ್ರೆಗೆ ದಾಖಲು

ರಾಜ್ಯ(ಕೊಪ್ಪಳ),ಆ.18 : ಮಗ ತೀರಿಕೊಂಡ 9ನೇ ದಿನದ ತಿಥಿ ಕಾರ್ಯದ ದಿನದಂದೇ ತಾಯಿಯೂ ಮೃತಪಟ್ಟಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ನಡೆದಿದೆ.

ರವಿಕುಮಾರ್, ರ್ ಎಂಬವರು ರಕ್ತದೊತ್ತಡ ಕಾಯಿಲೆಯಿಂದ ನಿಧನವಾಗಿದ್ದರು. ನಿನ್ನೆ ಶಿವಗಣಾರಧನೆ ಸಂದರ್ಭದಲ್ಲಿ ಅವರ ಅಮ್ಮ ನಿಧನರಾಗಿದ್ದು ಇವರು ಕುಷ್ಟಗಿ ಪಟ್ಟಣದ ನಿವಾಸಿಗಳು. ಆಗಸ್ಟ್ 9 ರಂದು ರವಿಕುಮಾ ತಾಯಿ ಮಾಬಮ್ಮಗೆ ಹೃದಯಾಘಾತ ಕಾಣಿಸಿಕೊಂಡಿದ್ದು, 9 ದಿನಗಳ ಅಂತರದಲ್ಲೇ ತಾಯಿಮಗ ಇಬ್ಬರೂ ಮೃತಪಟ್ಟಿದ್ದಾರೆ.

ತಾಯಿ ನಿಧನ ಸುದ್ದಿ ಕೇಳಿ ಮತ್ತಿಬ್ಬರು ಮಕ್ಕಳೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಕ್ತದೊತ್ತಡದಿಂದ ಗದಗ ಜಿಲ್ಲೆಯ ಗಜೇಂದ್ರಗಡ ತಹಶೀಲ್ದಾರ್ ಆಗಿರೋ ರಜನಿಕಾಂತ್ ಕೆಂಗಾರಿ ಹಾಗೂ ಸಹೋದರ ನಾಗರಾಜ್ ಕೆಂಗಾರಿ ಕೂಡಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಇಬ್ಬರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.(ಎಸ್.ಎಂ)

Leave a Reply

comments

Related Articles

error: