ಸುದ್ದಿ ಸಂಕ್ಷಿಪ್ತ

ಸತೀಶ್ ಜವರೇಗೌಡಗೆ ಅಭಿನಂದನೆ ಹಾಗೂ ಆಯ್ದ ಕವಿತೆಗಳ ವಾಚನ -ಗಾಯನ

ಮೈಸೂರು.ಮೇ.18 : ಕರ್ನಾಟಕ ಕಾವಲುಪಡೆ, ನೆಲದನಿ ಸಾಂಸ್ಕೃತಿ ಸಂಸ್ಥೆ ಹಾಗೂ ಸ್ಪಂದನ ಸಾಂಸ್ಕೃತಿಕ ಪರಿಷತ್ ಸಂಯುಕ್ತಾಶ್ರಯದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಮೈಸೂರು ಶಾಖೆಗೆ ನೂತನ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಟಿ.ಸತೀಶ್ ಜವರೇಗೌಡ ಅವರಿಗೆ ಅಭಿನಂದನೆ ಹಾಗೂ ಅವರ ಆಯ್ದ ಕವಿತೆಗಳ ವಾಚನ ಮತ್ತು ಗಾಯನ ಸಮಾರಂಭವು ಮೇ.19ರಂದು ಸಂಜೆ 4ಕ್ಕೆ ಕಲಾಮಂದಿರದ ಮನೆಯಂಗಳದಲ್ಲಿ ನಡೆಯಲಿದೆ.

ಖ್ಯಾತ ಹಿರಿಯ ಸಾಹಿತಿ ಸಿಪಿಕೆ ಕಾರ್ಯಕ್ರಮವನ್ನು ಉದ್ಘಾಟಿಸುವರು, ಡಾ.ನೀಲಗಿರಿ ತಳವಾರ ಅಧ್ಯಕ್ಷತೆ ವಹಿಸುವರು. ಡಾ.ಜಯಲಕ್ಷ್ಮಿ ಸೀತಾಪುರ ಅಭಿನಂದಿಸುವರು. ಮುಖ್ಯ ಅತಿಥಿಗಳಾಗಿ ಹೆಚ್.ಕೆ.ರಾಮು, ಅಧ್ಯಕ್ಷ ಎಂ.ಮೋಹನ್ ಕುಮಾರ್ ಗೌಡ, ಡಾ.ವೈ.ಡಿ.ರಾಜಣ್ಣ, ಟಿ.ಲೋಕೇಶ್ ಹುಣಸೂರು ಹಾಗೂ ಇತರರು ಪಾಲ್ಗೊಳ್ಳುವರು. (ಕೆ.ಎಂ.ಆರ್)

Leave a Reply

comments

Related Articles

error: