ಸುದ್ದಿ ಸಂಕ್ಷಿಪ್ತ
ವೃತಿ ತರಬೇತಿ ಅರ್ಜಿ ಆಹ್ವಾನ
ಮೈಸೂರು.ಮೇ.18 : ತಲಕಾವೇರಿ ಮಹಿಳಾ ವಿದ್ಯಾ ಸಂಸ್ಥೆಯಿಂದ 2016-17ನೇ ಸಾಲಿನ ವೃತಿ ತರಬೇತಿಗಾಗಿ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗುತ್ತಿದೆ.
ತರಬೇತಿಯಲ್ಲಿ ಫ್ಯಾಷನ್ ಡಿಸೈನಿಂಗ್, ಕೈ ಎಂಬ್ರಾಯಿಡರ್, ಮಿಷನ್ ಎಂಬ್ರಾಯಿಡರಿ, ಬ್ಯೂಟಿಷಿಯನ್, ಕಂಪ್ಯೂಟರ್, ಸ್ಪೋಕನ್ ಇಂಗ್ಲಿಷ್ ಹಾಗೂ ಇತರರ ತರಬೇತಿಯನ್ನು ನೀಡಲಾಗುವುದು ಅರ್ಜಿ ಸಲ್ಲಿಸಲು ಮೇ.25 ಕೊನೆಯ ದಿನವಾಗಿದೆ. ಆಸಕ್ತರು ತಮ್ಮ ಆಧಾರ ಕಾರ್ಡ್, ಭಾವಚಿತ್ರ ಮತ್ತು ಶಾಲಾ ದಾಖಲಾತಿಯೊಂದಿಗೆ ಸಂಸ್ಥೆಯಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 7090239569, 9845087396 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)