ಸುದ್ದಿ ಸಂಕ್ಷಿಪ್ತ

ರಂಗ ಸಂಪನ್ನರು ಕೃತಿ ಬಿಡುಗಡೆ ಮೇ.20ಕ್ಕೆ

ಮೈಸೂರು.ಮೇ.18 : ಹಿರಿಯ ರಂಗಕರ್ಮಿ ಪಿ.ಗಂಗಾಧರಸ್ವಾಮಿಯವರ ಕುರಿತು ಬೆಳಕೆರೆ ಮಂಜುನಾಥ ಅವರು ರಚಿಸಿರುವ ರಂಗ ಸಂಪನ್ನರು ಕೃತಿ ಬಿಡುಗಡೆಯನ್ನು ಮೇ.20ರಂದು ಬೆಳಿಗ್ಗೆ 11.30ಕ್ಕೆ ರಂಗಾಯಣದ ಶ್ರೀರಂಗ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ಬಿ.ಎಂ.ರಾಮಚಂದ್ರ ಪ್ರಾಸ್ತಾವಿಕವಾಗಿ ಮಾತನಾಡುವರು, ರಂಗತಜ್ಞ ಹೆಚ್.ಎಸ್.ಉಮೇಶ್ ಅಧ್ಯಕ್ಷತೆ ವಹಿಸುವರು, ಕೃತಿ ಕುರಿತು ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ಶ್ರೀಪಾದ್ ಭಟ್ ಮಾತನಾಡುವರು. ರಂಗಸಂಪನ್ನ ಗಂಗಾಧರಸ್ವಾಮಿ ಅವರ ಡನಾಡಿಗಳ ನೆನಪಿನಂಗಳ ನಡೆಯುವುದು ಅಲ್ಲದೇ  ಇಡೀ ದಿನ ರಂಗ ಸಂಬಂಧಿ ಕಾರ್ಯಕ್ರಮಗಳು ಜರುಗುವವು. (ಕೆ.ಎಂ.ಆರ್)

 

Leave a Reply

comments

Related Articles

error: