ಕರ್ನಾಟಕಪ್ರಮುಖ ಸುದ್ದಿ

ವಿವಿಧತೆಯಲ್ಲಿ ಏಕತೆ ಸಾರಿದ ರಾಷ್ಟ್ರೀಯ ಭಾವೈಕ್ಯತಾ ಸಮಾವೇಶ

ಪ್ರಮುಖಸುದ್ದಿ, ರಾಜ್ಯ(ಮಡಿಕೇರಿ) ಮೇ.18: – ಮಡಿಕೇರಿಯ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ ಆಯೋಜಿತ ಏಕತಾ ರಾಷ್ಟ್ರೀಯ ಭಾವೈಕ್ಯತಾ ಸಮಾವೇಶದಲ್ಲಿ 4 ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ದೇಶದ ವಿವಿಧತೆಗಳಲ್ಲಿನ ಏಕತಾ ಭಾವನೆಯ ಪ್ರದರ್ಶನ ವಿಶಿಷ್ಟವಾಗಿ ಮೂಡಿಬಂತು.

ಭಾರತದ ಬೇರೆ ಬೇರೆ ರಾಜ್ಯಗಳಿಂದ ಶಿಬಿರಕ್ಕೆ ಬಂದಿರುವ ವಿದ್ಯಾರ್ಥಿಗಳು ತಮ್ಮ ನಾಡಿನ ಸಾಂಸ್ಕೃತಿಕ ವೈಭವ ಅನಾವರಣಗೊಳಿಸುವ ಮೂಲಕ ತಮ್ಮಲ್ಲಿರುವ ಕಲಾ ಪ್ರತಿಭೆಯನ್ನು ಬೆಳಕಿಗೆ ತಂದರು. ನವದೆಹಲಿ, ನಾಗಪುರ, ಗುಜರಾತ್ ,ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ, ಪಂಜಾಬ್, ಪಶ್ತಿಮಬಂಗಾಳ,ತ್ರಿಪುರ, ಗೋವಾಗಳಿಗೆ ಸೇರಿದ ವಿದ್ಯಾರ್ಥಿ ಕಲಾ ತಂಡಗಳು ದೇಶಭಕ್ತಿ ಬಿಂಬಿಸುವ ವೈವಿಧ್ಯಮಯ ನೃತ್ಯ ಪ್ರಕಾರಗಳ ಮೂಲಕ ಸಭಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.  ಹಿನ್ನಲೆ ಸಂಗೀತ, ವಸ್ತ್ರವಿನ್ಯಾಸ, ಧ್ವನಿಬೆಳಕಿನ ಅಪೂರ್ವ ಸಂಯೋಜನೆಯಲ್ಲಿ ದೇಶದ ವಿವಿಧ ಭಾಗಗಳ ವಿದ್ಯಾರ್ಥಿಗಳು ಪ್ರದರ್ಶಿಸಿದ ನೃತ್ಯ, ಸಂಗೀತ ಕಾರ್ಯಕ್ರಮ ಯಾವುದೇ ವೃತ್ತಿಪರ ಕಲಾತಂಡಗಳ ಪ್ರದರ್ಶನಕ್ಕೆ ಕಮ್ಮಿಯಿಲ್ಲದಂತೆ ಮೂಡಿಬಂದದ್ದು ಗಮನಾರ್ಹವಾಗಿತ್ತು.

ನಮ್ಮೆಲ್ಲರ  ರಾಜ್ಯ, ಧರ್ಮ, ಭಾಷೆ, ಜಾತಿ, ಆಚರಣೆ ಬೇರೆ ಬೇರೆ. ಆದರೆ ನಮ್ಮೆಲ್ಲರ ದೇಶ ಮಾತ್ರ ಒಂದು. ಭಾರತ ಎಂಬ ಅಪೂರ್ವ ಸಂದೇಶವನ್ನು ಏಕತಾ ಭಾವೈಕ್ಯತಾ ಸಮಾವೇಶದಲ್ಲಿ ಯುವ ಕಲಾವಿದರು ಪರಿಣಾಮಕಾರಿಯಾಗಿ ಬಿಂಬಿಸುವಲ್ಲಿ ಯಶಸ್ವಿಯಾದರು. – (ಕೆಸಿಐ,ಎಸ್.ಎಚ್)

Leave a Reply

comments

Related Articles

error: