ಸುದ್ದಿ ಸಂಕ್ಷಿಪ್ತ

ಪಿಯುಸಿ ಅನುರ್ತೀಣ ವಿದ್ಯಾರ್ಥಿಗಳ ಉಚಿತ ಬೋಧನಾ ತರಗತಿ : ಮೇ19ಕ್ಕೆ ಚಾಲನೆ

ಮೈಸೂರು.ಮೇ.18 : ಅಖಿಲ ಕರ್ನಾಟಕ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಹಿತರಕ್ಷಣಾ ಸಂಘದಿಂದ ದ್ವಿತೀಯ ಪಿಯುಸಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಉಚಿತ ಬೋಧನಾ ತರಗತಿಗಳನ್ನು ಆಯೋಜಿಸಿದ್ದು ಮೇ.19ರಂದು ಬೆಳಿಗ್ಗೆ 11ಕ್ಕೆ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ತರಗತಿಗಳಿಗೆ ಚಾಲನೆ ನೀಡಲಾಗುವುದು.

ಕರ್ನಾಟಕ ಪೊಲೀಸ್ ಅಕಾಡೆಮಿ ಉಪನಿರ್ದೇಶಕಿ ಧರಣಿದೇವಿ ಮಾಲಗತ್ತಿ ಉದ್ಘಾಟಿಸುವರು. ಪ.ಪೂ.ಶಿ ಇಲಾಖೆ ಉಪನಿರ್ದೇಶಕ ಜಯಪ್ರಕಾಶ್ ಅಧ್ಯಕ್ಷತೆ ವಹಿಸುವರು. ಪ್ರಾಸ್ತಾವಿಕವಾಗಿ ಕಾಡ್ನೂರು ಶಿವೇಗೌಡರು ಮಾತನಾಡುವರು, ಪ್ರಾಚಾರ್ಯೆ ಆರ್.ವೈದ್ಯರಾಣಿ, ಸಂಘದ ರಾಜ್ಯ ಪ್ರಧಾನಕಾರ್ಯದರ್ಶಿ ಎಂ.ಎಂ.ಮಹದೇವ, ಖಜಾಂಚಿ ಎಸ್.ಬಾಲಸುಬ್ರಹ್ಮಣ್ಯಂ, ವಿಭಾಗೀಯ ಅಧ್ಯಕ್ಷ ರವಿಶಂಕರ, ಜಿಲ್ಲಾಧ್ಯಕ್ಷ ಎನ್.ಜವರೇಗೌಡ, ನಗರಾಧ್ಯಕ್ಷ ಎನ್.ಜೆ.ಮಂಜುನಾಥ್ ಹಾಗೂ ಗೌರವಾಧ್ಯಕ್ಷ ಎನ್.ಸಿ.ಶಂಕರ್ ಮತ್ತು ಇತರರು ಪಾಲ್ಗೊಳ್ಳುವರು. (ಕೆ.ಎಂ.ಆರ್)

Leave a Reply

comments

Related Articles

error: